ಶಿವಮೊಗ್ಗ, ಫೆ. 23:
ಸರ್ಕಾರವು ಎಲ್ಲಾ ಹಾಡಿಗಳು/ತಾಂಡಗಳು, ಗೊಲ್ಲರಹಟ್ಟಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಆದೇಶಿಸಿದನ್ವಯ ಜಿಲ್ಲೆಯ ಈ ಕೆಳಕಂಡ ತಾಲ್ಲೂಕುಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಹರು ಆಯಾ ತಾಲ್ಲೂಕು/ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಶಿವಮೊಗ್ಗ ತಾಲ್ಲೂಕಿನ ಸಿದ್ಲೀಪುರ ತಾಂಡ, ಬೆಳಲಕಟ್ಟೆ ತಾಂಡ, ಹೊಳೆಬೆನವಳ್ಳಿ ತಾಂಡ, ಹೊಸಮನೆ ತಾಂಡ, ಯಡವಾಲ ತಾಂಡ(ದೇವಬಾಳು ತಾಂಡ), ಗುಡ್ರುಕೊಪ್ಪ ತಾಂಡ(ಮಾಳೇನಹಳ್ಳಿ ತಾಂಡ), ಕೊನಗವಳ್ಳಿ ತಾಂಡ, ಬನ್ನೀಕೆರೆ ತಾಂಡ, ಬಿಕ್ಕೋನಹಳ್ಳಿ ತಾಂಡ, ನಾರಾಯಣಪರ ತಾಂಡ(ತಾಂಡ ಪ್ರದೇಶಗಳು) ಮತ್ತು ಚನ್ನಹಳ್ಳಿ, ರಟ್ಟೆಹಳ್ಳಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಲೋನಿ) ಇಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಹರು ಫೆ.14 ರಿಂದ ಮಾರ್ಚ್ 15 ರೊಳಗೆ ಅರ್ಜಿ ಸಲ್ಲಿಸಬಹುದು.
ಭದ್ರಾವತಿ ತಾಲ್ಲೂಕಿನ ಬಿಳಕಿ ತಾಂಡ, ಇಂದಿರಾನಗರ ತಾಂಡ ಮತ್ತು ನಾಗತಿಬೆಳಗಲು ತಾಂಡ(ತಾಂಡ ಪ್ರದೇಶಗಳು) ಆದ್ರಿಹಳ್ಳಿ ಗ್ರಾಮ, ಹೊಳೆಗಂಗೂರು ಗ್ರಾಮ, ಬೊಮ್ಮನಕಟ್ಟೆ ಗ್ರಾಮ, ಬೋವಿ ಕಾಲೋನಿ ಗ್ರಾಮ, ವಡ್ಡರಹಟ್ಟಿ ಗ್ರಾಮ(ಪ.ಜಾತಿ/ಪ.ಪಂಗಡ ಕಾಲೋನಿ) ಇಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಫೆ.16 ರಿಂದ ಮಾ.17 ರೊಳೆಗೆ ಅರ್ಜಿ ಸಲ್ಲಿಸಬಹುದು.