Site icon TUNGATARANGA

ಹರ್ಷ ಹತ್ಯೆ : ಕೋಟೆ, ದೊಡ್ಡಪೇಟೆ ಪೊಲೀಸರ ವಿರುದ್ಧ ತನಿಖೆಗೆ ಗೃಹ ಸಚಿವರೇ ಆದೇಶಿಸಿದ್ರು…!

ಶಿವಮೊಗ್ಗ,ಫೆ.೨೩:
ನಗರದಲ್ಲಿನ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ೮ ಆರೋಪಿಗಳ್ನು ಬಂಧಿಸಲಾಗಿದೆ. ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸರೇ ಅಪರಾಧಿಗಳನ್ನು ಮಟ್ಟ ಹಾಕೋದರಲ್ಲಿ ನಿರ್ಲಕ್ಷ್ಯ ವಹಿಸಿರೋದಾಗಿ ತಿಳಿದು ಬಂದಿದೆ.
ಈ ಕುರಿತಂತೆ ತಮ್ಮ ಜಯಮಹಲ್ ನಿವಾಸದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದಂತ ಅವರು, ಹರ್ಷ ಹತ್ಯೆ ಪ್ರಕರಣದಲ್ಲಿ ಇಂದು ಮತ್ತಿಬ್ಬರು ಸೇರಿದಂತೆ ೮ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇವರನ್ನು ಮಟ್ಟ ಹಾಕಬೇಕಿದ್ದಂತ ಪೊಲೀಸರ ಬಗ್ಗೆ ದೂರು ಬಂದಿವೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಕೋಟೆ, ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರ ವಿರುದ್ಧ ತನಿಖೆ ನಡೆಸಿ, ವರದಿ ನೀಡುವಂತೆ ಸೂಚಿಸಿರೋದಾಗಿ ತಿಳಿಸಿದರು.


ಸಮಾಜಘಾತುಕ ಬೆಳವಣಿಗೆ ಕುರಿತಂತೆ ಪೊಲೀಸರ ಪಾತ್ರದ ಬಗ್ಗೆ ವರದಿ ಕೇಳಿದ್ದೇನೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಗೆ ನಿರ್ದೇಶಿಸಲಾಗಿದೆ. ಒಂದು ವಾರದಲ್ಲಿ ವರದಿ ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.

Exit mobile version