Site icon TUNGATARANGA

ಎರಡು ಸಾವಿರ ದಾಟಿದ ಕೊರೊನಾ ಸೊಂಕು!


ಶಿವಮೊಗ್ಗ, ಜು.31:
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಸಹ ಮತ್ತೆ 3 ಜನ ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ನಿಧನ ಹೊಂದಿದವರ ಸಂಖ್ಯೆ 43 ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗದಲ್ಲಿ 112 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದಿನ ಸಂಖ್ಯೆ ವ್ಯತ್ಯಾಸವಾಗಿದೆ.
ದುರಂತ ಗೊತ್ತೇ…, ರಾಜ್ಯದ ದೊರೆ, ಶಿವಮೊಗ್ಗ ನಗರದ ಶಾಸಕರಿಗೆ, ಹಿರಿಯ ಅಧಿಕಾರಿಗಳಿಗೆಗೆ ಕೊರೊನಾ ಸೊಂಕು ಕಾಣಿಸಿಕೊಂಡ ಬೆನ್ನಲ್ಲೇ ಜನಪ್ರತಿನಿಧಿಗಳ ಕಛೇರಿಗೆ ನಿತ್ಯನಿರಂತರ ಎಂಬಂತೆ ದಾಳಿ ಇಡುತ್ತಿದೆ.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ 595 ನೆಗಿಟೀವ್ ಇದ್ದರೆ 112 ಪಾಸಿಟಿವ್ ಬಂದಿದೆ. ಭಯ ಬರಲು ಕಾರಣ ಎಲ್ಲೆಡೆ ಕೊರೊನಾ ಕಂಟಕ ಕಾಣುತ್ತಿರುವುದು ಎನ್ನಲಾಗಿದೆ.
32 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 2094 ಸೋಂಕಿತರಲ್ಲಿ 1095 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಶಿವಮೊಗ್ಗ ನಗರದಲ್ಲಿ 61, ಶಿಕಾರಿಪುರದಲ್ಲಿ 13, ಭದ್ರಾವತಿಯಲ್ಲಿ23, ಸಾಗರ 6, ಸೊರಬದಲ್ಲಿ 5, ಇತರೆ ಜಿಲ್ಲೆಗಳ 4 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 43 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗಲಿದೆ. ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.

Exit mobile version