Site icon TUNGATARANGA

23 ರಂದು ಕರೆಂಟ್ ಕಟ್, ಪಂಪ್‌ಸೆಟ್‌ಗಳ ಅನಧಿಕೃತ ವಿದ್ಯತ್ ಸಂಪರ್ಕ ತೆಗೆಯಲು ಲಾಸ್ಟ್ ವಾರ್ನಿಂಗ್ !

ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಫೆ21: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-೦೫ ರಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.23 ರ ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆವರೆಗೆ ನಗರದ ಗೋಪಾಲಗೌಡ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಆಲ್‌ಹರೀಮ್ ಲೇಔಟ್, ಕೆ.ಹೆಚ್.ಬಿ. ಗೋಪಾಳ, ಕೆಹೆಚ್‌ಬಿ ಪ್ರೆಸ್ ಕಾಲೋನಿ, ಕೆಹೆಚ್‌ಬಿ ಕಾಲೋನಿ, ಪೊಲೀಸ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮೆಸ್ಕಾಂ ಸಾರ್ವಜನಿಕ ಪ್ರಕಟಣೆ


ಶಿವಮೊಗ್ಗ, ಫೆ. 21:

ಹೊಳೆಹೊನ್ನೂರು ಉಪವಿಭಾಗ ವ್ಯಾಪ್ತಿಯ ಹೊಳೆಹೊನ್ನೂರು, ಕೂಡ್ಲಿಗೆರೆ, ಮಲ್ಲಾಪುರ ಮತ್ತು ಮಾವಿನಕಟ್ಟೆ ವಿ ವಿ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಬಹಳಷ್ಟು ಪಂಪ್‌ಸೆಟ್ ಫೀಡರ್‌ಗಳು ಓವರ್ ಲೋಡ್ ಆಗಿ ಪದೇ ಪದೇ ವಿದ್ಯುತ್ ಮಾರ್ಗಗಳು ಟ್ರಿಪ್ ಆಗುತ್ತಿದ್ದು ವಿದ್ಯುತ್ ವ್ಯತ್ಯಯವಾಗುತ್ತಿದೆ.

ಈ ಮಾರ್ಗಗಳಲ್ಲಿ ಅನಧೀಕೃತವಾಗಿ ಅಳವಡಿಸಿಕೊಂಡಿರುವ ಪಂಪ್‌ಸೆಟ್‌ಗಳಿಂದ ಈ ಸಮಸ್ಯೆ ಆಗುತ್ತಿರುವುದು ಮೆಸ್ಕಾಂ ಗಮನಕ್ಕೆ ಬಂದಿದ್ದು, ಆರ್.ಆರ್. ನಂಬರ್ ಪಡೆದ ಪಂಪ್‌ಸೆಟ್ ಗ್ರಾಹಕರಿಗೆ ವಿದ್ಯುತ್ ಸರಬರಾಜ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅನಧಿಕೃತ ಬಳಕೆದಾರರು ಕೂಡಲೇ ತಮ್ಮ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕಗಳನ್ನು ಸ್ವಯಂ ಸ್ಪೂರ್ತಿಯಿಂದ ತೆಗೆದು ಹಾಕಲು ತಿಳಿಸಿದೆ.

ತಪ್ಪಿದಲ್ಲಿ ಮೆಸ್ಕಾಂ ಸೂಕ್ತ ಕ್ರಮ ತೆಗೆದುಕೊಳ್ಳುವುದು. ಈ ಸಂಬಂಧ ಸಾರ್ವಜನಿಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Exit mobile version