Site icon TUNGATARANGA

ಕಷ್ಟದ ಅರಿವು ಮಕ್ಕಳ ಬದುಕಿಗೆ ರಾಜಮಾರ್ಗ

ಮಕ್ಕಳ ಮನೋಭೂಮಿಕೆ ಕುರಿತು ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಮುಹಮ್ಮದ್ ಮುಂತಾಜೀಮ್ ಅವರು ಮನದಾಳದ ಮಾತುಗಳನ್ನಾಡಿದ್ದಾರೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿ ಮಾಡಬಹುದು ಎಂಬ ನಾಣ್ಣುಡಿಗೆ ಪೂರಕವಾಗಿ ಮುಹಮ್ಮದ್ ಅವರು ಇಂದಿನ ಬದುಕಿನ ಸ್ಥಿತಿಗತಿಗಳು, ಮಕ್ಕಳನ್ನು ನಾವು ಸಾಕುತ್ತಿರುವ ಬಗ್ಗೆ, ಮಕ್ಕಳ ವರ್ತನೆ ಬಗ್ಗೆ ಚಿತ್ರಣ ನೀಡಿದ್ದಾರೆ.


ಇಂದಿನ ಕಾಲ ತಂತ್ರಜ್ಞಾನದ ಕಾಲ. ಎಲ್ಲಾ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಹುದ್ದೆಯಲ್ಲಿ ಇರಬೇಕು ಮತ್ತು ಐಶಾರಾಮದ ಜೀವನ ಸಾಗಿಸಬೇಕು ಹಾಗೂ ಕಷ್ಟಗಳು ಇರಬಾರದು ಅಂತ ಬಯಸುವರು ಹಾಗೂ ಎಲ್ಲಾ ತರಹದ ಸೌಲಭ್ಯಗಳನ್ನೂ ಒದಗಿಸಲು ಸಿದ್ಧರಾಗಿರುವರು. ಮಕ್ಕಳಿಗೆ ಎಲ್ಲಾ ತರಹದ ಸುಖಬೇಕೆಂದು ಬಯಸುವರು ಮಕ್ಕಳಿಗೆ ಸ್ವಲ್ಪನಾದರೂ ಕಷ್ಟಗಳು ಏನೆಂದು ಗೊತ್ತುಪಡಿಸಬೇಕು ಇಲ್ಲವೆಂದರೆ ಮುಂದೆ ಮಕ್ಕಳಿಗೆ ಅನೇಕ ವಸ್ತುಗಳ ಬೆಲೆ ಗೊತ್ತಾಗುವುದಿಲ್ಲ ಹಾಗೂ ಅದರ ಅರಿವು ಕೂಡ ಇರುವುದಿಲ್ಲ.


ನಾನು ನನ್ನ ಸಹೋದ್ಯೋಗಿಗಳೊಂದಿಗೆ ಮಾತಾಡುವಾಗ ಸಹೋದ್ಯೋಗಿ ಒಬ್ಬರು ಹೇಳಿದರು ಈ ಹುಡುಗ ೩೦ಲಕ್ಷದ ಕಾರು ಖರೀದಿಸಿದ್ದಾನೆ ಅಪ್ಪ ಅಮ್ಮ ಜೊತೆ ಹಠ ಮಾಡಿ ಅಂತ ಹೇಳಿದರು. ನನಗೆ ಆಶ್ಚರ್ಯವಾಯಿತು , 30ಲಕ್ಷದ ಕಾರು ಹೀಗೆ ಖರೀದಿಸಿದ. ಒಬ್ಬ ವ್ಯಕ್ತಿಯು ೩೦ಲಕ್ಷ ಸಂಪಾದನೆ ಮಾಡಬೇಕೆಂದರೆ ವರ್ಷಗಳು, ದಶಕಗಳು, ಇಲ್ಲವೇ ಜೀವನವೇ ಹೋಗಬಹುದು .ಆ ೩೦ಲಕ್ಷದಿಂದ ಒಬ್ಬ ಮನೆ ಕಟ್ಟಿಕೊಳ್ಳಬಹುದು, ಎಷ್ಟು ನೂರಾರು ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಶುಲ್ಕವಾಗಬಹುದು ಹೀಗೆ ಯೋಚನೆ ಮಾಡುತ್ತಾ ನಿಜವಾಗಿಯು ಇವರಿಗೆ ತಂದೆತಾಯಿಗಳು ಕಷ್ಟ ಗೊತ್ತುಪಡಿಸಿದ್ದಾರೆಯೇ, ಹಣದ ಬೆಲೆ ಗೊತ್ತು ಇದೆಯಾ ಇಲ್ಲ ಅಂತ ಅನಿಸಿತು.


ರಾಯಚೂರು ಕರ್ನಾಟಕದಲ್ಲಿ ಬಿಸಿಲಿಗೆ ಹೆಸರಾದ ಒಂದು ಜಿಲ್ಲೆ. ಬಡ ಹಾಗೂ ಹೆಚ್ಚಿಗೆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವ ಜಿಲ್ಲೆಗಳಲ್ಲಿ ಒಂದು ಜಿಲ್ಲೆಯಾಗಿದೆ. ಬೇಸಿಗೆ ಕಾಲದಲ್ಲಿ ಬಹಳ ಬಿಸಿಲು.ಅಲ್ಲಿನ ಸಹೋದ್ಯೋಗಿಗಳು ಹೇಳುವರು ಬೇಸಿಗೆಯಲ್ಲಿ ಕೂಲರ್ ಇಲ್ಲದೆ ಇರುವುದು ಕಷ್ಟ ಅಂತ. ಒಂದು ಕ್ಷಣ ಯೋಚಿಸುತಿದ್ದೆ ಹಳ್ಳಿಗಳಲ್ಲಿ ಮೊದಲೇ ವಿದ್ಯುತ್ ಕೊರತೆ ಇರುತ್ತದೆ, ಅನೇಕ ಜನರು ತಮ್ಮ ಮನೆಗಳಿಗೆ ಫ್ಯಾನ್, ಕೂಲೆರ್ ಖರೀದಿಸುವ ಸಾಮರ್ಥ್ಯವಿಲ್ಲ ಆದರೂ ರಾಯಚೂರಿನ ಜನರು ಜೀವನ ನಡೆಸುತ್ತಿದ್ದಾರೆ ಹಾಗೂ ಅವರು ಈ ಬಿಸಿಲಿಗೆ ಹೊಂದಿಕೊಂಡು ಹೋಗಿದ್ದಾರೆ. ಎಷ್ಟು ವಿದ್ಯಾರ್ಥಿಗಳು ಹಾಗೂ ಕೆಲ ಜನರು ಬೇಸಿಗೆ ಬಿಟ್ಟು ಬೇರೆ ಕಾಲದಲ್ಲೂ ಕಾರಿನಲ್ಲ ಹೋಗುವಾಗ ಂಅ ಹಾಕಿ ಕಿಟಕಿ ಮುಚ್ಚಿರಿ ಎನ್ನುವರು. ಬಿಸಿಲು ಇಲ್ಲದ ಕಾಲದಲ್ಲೂ ಂಅ ಬೇಕು ಅಂತ ಕೇಳಿದ್ದ ನನಗೆ ಆಶ್ಚರ್ಯವಾಯಿತು.


ಮೊದಲು ಜನರು ತಮ್ಮ ಚಪ್ಪಲಿ ಕೆಟ್ಟಿದಾಗ ಸರಿಪಡಿಸಲು ಹೋಗುತಿದ್ದರು ಇಂದು ಚಪ್ಪಲಿ ಕೆಟ್ಟು ಹೋದರೆ ಹೊಸ ಚಪ್ಪಲಿ ಬೇಕು ಎನ್ನುವರು. ಹಿಂದೆ ಲೇಖನಿಯ ಇಂಕ್ ಖಾಲಿಯಾದರೆ ಇನ್ನೊಂದು ಇಂಕಿನ ಕಡ್ಡಿ ಖರೀದಿಸುವರು. ಇಂದು ಒಂದು ಪೆನ್ ಖಾಲಿಯಾದರೆ ಹೊಸ ಪೆನ್ ಹಾಗೂ ಇಂಕ್ ಗಳ ರೀಫೈಲ್ಗಳು ಸಿಗುವುದಿಲ್ಲ. ನಮ್ಮ ತಂದೆತಾಯಿ ನಾವು ಸಣ್ಣವರು ಇದ್ದಾಗ ಒಂದು ಪೆನ್ ಇಲ್ಲ ಬುಕ್ ಕಳೆದುಹೋದರೆ ನಿಮಗೆ ಏನೂ ಗೊತ್ತು ಪೆನ್ ಹಾಗೂ ಪುಸ್ತಕಗಳ ಬೆಲೆ ಬಡ ಮಕ್ಕಳಿಗೆ ಕೇಳಿ ಅದರ ಬೆಲೆ ಏನೂ ಅಂತ. ಇಂದಿನ ಕೆಲವು ಮಕ್ಕಳಿಗೆ ವಸ್ತುಗಳ, ಹಣದ ಬೆಲೆ ಗೊತ್ತಿಲ್ಲದಿರುವುದು ನಿಜ.


ಕಾರು, ಬೈಕ್ ಬೇಕು ಹಾಗೂ ಅವು ಜೀವನದಲ್ಲಿ ಅವಶ್ಯಕತೆ ಇರುತ್ತದೆ. ಕಾರು ಬೈಕ್, ಂಅ ಖರೀದಿಸಬೇಡಿ ಅಂತ ನಾನು ಹೇಳುವುದಿಲ್ಲ. ಅವು ಬೇಕು ಆದರೆ ಅದರ ಅವಶ್ಯಕತೆ, ಅನಿವಾರ್ಯ ಇದ್ದರೆ ಮಾತ್ರ ಉಪಯೋಗಿಸಬೇಕು. ಪ್ರತಿ ಹಂತದಲ್ಲೂ ನಾವು ಯಾವುದೇ ವಸ್ತುವನ್ನೂ ಅತೀಯಾಗಿ ಅವಲಂಬನೆ ಮಾಡಿದರೆ ಮುಂದೆ ಸಣ್ಣ ಪುಟ್ಟ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಎಷ್ಟು ಜನರ ಜೀವನ ಕಷ್ಟದಿಂದ ಬೆಳೆದ ಜೀವನವಾಗಿರುತ್ತೆ.ಕೆಲವರು ಶ್ರೀಮಂತರಿದ್ದರು ತಮ್ಮ ಮಕ್ಕಳಿಗೆ ಕಷ್ಟ ಹಾಗೂ ಬಡತನದ ಬಗ್ಗೆ ಅರಿವು ಮೂಡಿಸುವರೂ ಹಾಗೂ ಅವರ ಮಕ್ಕಳು ಪ್ರತಿ ವಿಷಯದಲ್ಲೂ ಎಲ್ಲದುಕ್ಕು ಅವಲಂಬನೆ ಆಗುವಷ್ಟು ಸ್ಥಿತಿಗೆ ತಮ್ಮನ್ನು ತೊಡಗಿಸಲು ಬಿಡುವುದಿಲ್ಲ. ಮಕ್ಕಳಿಗೆ ಸ್ವಲ್ಪ ಕಷ್ಟ ಏನೂ ಎಂದು ಪೋಷಕರು ಅರಿವು ಮೂಡಿಸಿದರೆ ನಾಳೆ ಮಕ್ಕಳಿಗೆ ಎಲ್ಲಾ ವಸ್ತುವಿನ ಬೆಲೆಗಳ ಅರಿವು ಉಂಟಾಗುವುದು.

Exit mobile version