Site icon TUNGATARANGA

ಶಿವಮೊಗ್ಗದ ಕಿರಿಕ್ ಭದ್ರಾವತಿಗೂ ತಟ್ಟಿತಾ? 2 ದಿನ ನಿಷೇಧಾಜ್ಞೆ: ನಗರದ ಶಾಲೆಗಳಿಗೆ ರಜೆ

ಭದ್ರಾವತಿ:
ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಹಿಂದೂ ಕಾರ್ಯಕರ್ತನ ಹತ್ಯೆ ಪರಿಣಾಮ ಉಂಟಾದ ಅಹಿತರಕ ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲೂ ಸಹ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.


ಈ ಕುರಿತಂತೆ ಆದೇಶ ಹೊರಡಿಸಿರುವ ತಾಲೂಕು ದಂಡಾಧಿಕಾರಿಗಳು, ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಉಂಟಾಗಿರುವ ಪ್ರಕ್ಷುಬ್ದ ವಾತಾವರಣವನ್ನು ಅವಲೋಕಿಸಿ ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಫೆ.21ರ ಬೆಳಗ್ಗೆ 8 ಗಂಟೆಯಿಂದ ಫೆ.22ರ ರಾತ್ರಿ 10 ಗಂಟೆಯವರೆಗೂ ನಗರ ವ್ಯಾಪ್ತಿ(35 ವಾರ್ಡ್‌ಗಳಲ್ಲಿ) 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಗಳಿಗೆ ರಜೆ ಘೋಷಣೆ
ಇನ್ನು, ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸೋಮವಾರ 1ರಿಂದ 10ನೆಯ ತರಗತಿಯವರೆಗಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೆಲಸಕ್ಕೆ ಬೇಕಾಗಿದ್ದಾರೆ.


ಕಾರ್ಕಳದ ಸ್ಪಂದನ ಜೀವ ಆಯುರ್ವೇದ ಕಂಪೆನಿಗೆ ಎಸ್ಸೆಸ್ಸೆಲ್ಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 40 ವರ್ಷದೊಳಗಿನ ಪುರುಷ ಹಾಗೂ ಮಹಿಳೆಯರು ಕೆಲಸಕ್ಕೆ ಬೇಕಾಗಿದ್ದಾರೆ.

ಆಸಕ್ತರು ಕೂಡಲೇ ಸಂಪರ್ಕಿಸಿ.:
ವಿಳಾಸ: D.NO: 414/33 2nd Floor S.J.Arcade, Karnataka
ಮೊಬೈಲ್ ನಂ: 8105295921, 7204210734/


1 ನೆಯ ತರಗತಿ ಯಿಂದ 10 ನೇ ತರಗತಿಯವರೆನ ಭದ್ರಾವತಿ ನಗರ ಭಾಗದ ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿರುತ್ತದೆ. ಎಸ್’ಎಸ್’ಎಲ್’ಸಿ ಪೂರ್ವಭಾವಿ ಪರೀಕ್ಷೆಗಳನ್ನು ಸಹ ಮುಂದೂಡಲಾಗುತ್ತದೆ. ಭದ್ರಾವತಿ ನಗರ ಭಾಗ ಹೊರತು ಪಡಿಸಿ ಭದ್ರಾವತಿ ಗ್ರಾಮಾಂತರ ವ್ಯಾಪ್ತಿಯಲ್ಲಿ ಶಾಲೆಗಳು ಯಥಾ ಪ್ರಕಾರ ಇರುತ್ತವೆ ಎಂದು ತಿಳಿಸಿದೆ.

Exit mobile version