Site icon TUNGATARANGA

ಶಾಸಕ ಪ್ರಸನ್ನಕುಮಾರ್ /ಭಾನುಪ್ರಕಾಶರಿಗೂ ಕಾಡಿದ ಸೊಂಕು!

ಶಿವಮೊಗ್ಗ, ಆ.03:

ಪರಿಷತ್ ಶಾಸಕ, ಜಿಲ್ಲಾ ಕಾಂಗ್ರೆಸ್ ಮುಖಂಡ ಆರ್.ಪ್ರಸನ್ನ ಕುಮಾರ್ ಅವರಿಗೆ ಕೊರೋನ ಸೋಂಕು ದೃಢಪಟ್ಟಿದ್ದು ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ನಲ್ಲಿರುವುದಾಗಿ ಅವರು ಸುದ್ದಿಮೂಲಗಳ ಮೂಲಕ ತಿಳಿಸಿದ್ದಾರೆ.
ಕಳೆದ ಜು. 27 ರಂದು ಬೆಂಗಳೂರಿಗೆ ಹೋಗಿ ಬಂದ ಹಿನ್ನಲೆಯಲ್ಲಿ ಅನುಮಾನದಿಂದ ಕೊರೋನ ಪರೀಕ್ಷೆಗೆ ಒಳಪಟ್ಟಿದ್ದು ಇಂದು ಕೊರೋನ ಪಾಸಿಟಿವ್ ಎಂದು ವರದಿ ಬಂದಿದೆ. ಆದರೆ ನನಗೆ ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ವರದಿ ಪಾಸಿಟಿವ್ ಎಂದು ತಿಳಿದುಬಂದಿದೆ. ಈ ಸಂಬಂಧ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ಆಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಸಹ ಕ್ವಾರಂಟೈನ್ ನಲ್ಲಿದ್ದು, ಪರೀಕ್ಷೆಗೆ ಒಳಪಡುವಂತೆ ಆರ್.ಪ್ರಸನ್ನ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಭಾನುಪ್ರಕಾಶ್ ರಿಗೂ ಕಾಡಿದ ಕಂಟಕ!
ಶಿವಮೊಗ್ಗ, ಆ.03:
ಮಾಜಿ ವಿಧಾನ ಪರಿಷತ್ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ.
ಮಾಜಿ ಪರಿಷತ್ ಸದಸ್ಯರಾದ ಭಾನುಪ್ರಕಾಶ್ ಎಂದು ದೃಢಪಟ್ಟಿದೆ. ಹೋಂ ಐಸೋಲೇಶನ್ ಗೆ‌ ಭಾನುಪ್ರಕಾಶ್ ಒಳಪಟ್ಟಿದ್ದಾರೆ.
ಶಿವಮೊಗ್ಗದ ಮತ್ತೂರು ಗ್ರಾಮದಲ್ಲಿರುವ ನಿವಾಸದಲ್ಲಿ ಐಸೋಲೇಶನ್ ಆಗಿದ್ದಾರೆ. ಇತ್ತೀಚೆಗೆ ಬಿಜೆಪಿ ಪ್ರಕೋಷ್ಠಕದ ಸಂಯೋಜಕರಾಗಿ ಆಯ್ಕೆಯಾಗಿದ್ದರು.

Exit mobile version