Site icon TUNGATARANGA

ಪ್ರಿಯತಮೆಗೆ ಬೇರೆಯವನ ಜೊತೆ ನಿಶ್ಚಿತಾರ್ಥ: ಪ್ರಿಯಕರ ಆತ್ಮಹತ್ಯೆ

Banglur Crime

ಹೊಸನಗರ:  ಪ್ರೀತಿಸಿದ ಯುವತಿಗೆ ಬೇರೆ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥ  ಮಾಡಿದ್ದರಿಂದ ಬೇಸರಗೊಂಡಿದ್ದ ಪ್ರಿಯಕರನೊಬ್ಬ ಪ್ರೇಮಿಗಳ ದಿನಾಚರಣೆಯಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ರಿಪ್ಪನ್ ಪೇಟೆಯ   ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ರಮೇಶ ಅವರ ಪುತ್ರ ಅವಿನಾಶ (27) ಮೃತ ಯುವಕ.

ಅವಿನಾಶ ಅವರು ತಮ್ಮ ಗ್ರಾಮದ ಸ್ವಜಾತಿಯ ಯುವತಿಯನ್ನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಎರಡು ತಿಂಗಳ ಹಿಂದೆ ಯುವತಿಗೆ ಬೇರೆ ಯುವಕನೊಂದಿಗೆ ಕುಟುಂಬದವರು ವಿವಾಹ ನಿಗದಿಗೊಳಿಸಿದ್ದರು. ಇದನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಯುವತಿಯ ಜೊತೆಗೆ ಕಳೆದ ಸಂತಸದ ಕ್ಷಣಗಳನ್ನು ವಾಟ್ಸ್‌ಆಯಪ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ಗಳಿಗೆ ಭಾನುವಾರ ತಡರಾತ್ರಿ ಶೇರ್‌ ಮಾಡಿ ಮನದಾಳದ ನೋವನ್ನು ಹಂಚಿಕೊಂಡು, ಬಳಿಕ ತೋಟದ ಮನೆಯ ಪಂಪ್‌ಸೆಟ್‌ನ ಜಂತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version