ಶಿವಮೊಗ್ಗ, ಜು.31:
ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಚಿದಾನಂದ ವಟಾರೆ ಅವರಿಗೆ ನಿನ್ನೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಪಾಲಿಕೆಯ ಹೆಚ್ಚುವರಿ ಪ್ರಭಾರ ಆಯುಕ್ತರನ್ನಾಗಿ ಉಪ ಆಯುಕ್ತ ಹೆಚ್. ಪಿ. ಪ್ರಮೋದ್ ಅವರನ್ನು ನೇಮಕ ಮಾಡಲಾಗಿದೆ.
ಬರುವ ಆಗಸ್ಟ್ 16ರವರೆಗೆ ಪಾಲಿಕೆಯ ಎಲ್ಲ ಕಾರ್ಯಕ್ರಮಗಳು ಹಾಗೂ ಕೋವಿಡ್ 9 ಕಾರ್ಯಕ್ರಮಗಳಿಗಾಗಿ ಬರುವ ಆಗಸ್ಟ್ 16 ರವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರ ಜವಾಬ್ದಾರಿಯನ್ನು ಉಪ ಆಯುಕ್ತ ಪ್ರಮೋದ್ ಅವರಿಗೆ ನೀಡಲಾಗಿದೆ.
ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದು ಪ್ರಮೋದ್ ಅವರು ಕರ್ತವ್ಯ ನಿರ್ವಹಿಸಲು ಹಾಗೂ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸೂಚಿಸಿದ್ದಾರೆ.
ಪಾಲಿಕೆಯಲ್ಲಿ ಢವಢವ
ಶಿವಮೊಗ್ಗ ಮಹಾನಗರ ಪಾಲಿಕೆಯ ತುಂಬಾ ಭಯವೋ ಭಯ.ಏಕೆಂದರೆ ಅಲ್ಲಿನ ಹಿರಿಯ ಅಧಿಕಾರಿ, ಪಾಲಿಕೆ ಆಯುಕ್ತರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಅಕ್ಕಪಕ್ಕದಲ್ಲಿ ಕೆಲಸ ಮಾಡಿದ್ದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆಯುಕ್ತರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ದಿನಕ್ಕಿಂತ ಪೂರ್ವದಲ್ಲಿ ಹತ್ತು ದಿನಗಳ ಕಾಲ ಅವಧಿಯಲ್ಲಿ ಪಾಲಿಕೆ ಅಥವಾ ಸ್ಮಾರ್ಟ್ ಸಿಟಿ ಕಛೇರಿ ಹಾಗೂ ಕಾಮಗಾರಿಯಲ್ಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಅಗತ್ಯವಿರುವ ಸಂದರ್ಭಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳನ್ನು ಕರೆಸಿಕೊಂಡು ತಮ್ಮ ಸ್ವಸ್ಥಾನಕ್ಕೆ ಕರೆಸಿಕೊಂಡು ನಡೆಯಬೇಕಾದ ಕಾಮಗಾರಿಯ ಬಗ್ಗೆ ಸೂಚನೆಗಳನ್ನು ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ಬಂದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಎದೆಯಲ್ಲಿ ಭಯ ಶುರುವಾಗಿದೆ.