Site icon TUNGATARANGA

ರೌಡಿ ಲೀಸ್ಟಿಂದ ಬಿಡುಗಡೆ: ಅಲ್ಲಿ ನೊಂದು ಬೆಂದವರಿಂದ ಎಸ್ಪಿ ಲಕ್ಷ್ಮಿ ಪ್ರಸಾದ್ ರಿಗೆ ಅಭಿನಂದನೆ

ಶಿವಮೊಗ್ಗ, ಜ.06:
ರೌಡಿ ಲೀಸ್ಟಲ್ಲಿ ಸೇರಿಕೊಂಡು ನರಕ ಯಾತನೆ ಅನುಭವಿಸುತ್ತಿದ್ದ ಜಿಲ್ಲೆಯ ಸುಮಾರು ಸಾವಿರಕ್ಕೂ ಹೆಚ್ಚು ನೊಂದವರಿಗೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾಸ್ ನೇತೃತ್ವದ ಪೊಲೀಸ್ ಇಲಾಖೆ ಬಿಗ್ ರಿಲೀಫ್ ನೀಡಿದೆ.
ಜಿಲ್ಲಾ ರಕ್ಷಣಾಧಿಕಾರಿಗಳು ಅದೇಗೋ ಸೇರ್ಪಡೆಯಾದ ರೌಡಿ ಲೀಸ್ಟ್ ನವರನ್ನು ಗಮನಿಸಿ, ಈ ನೋವಿನ ಕಥೆಯನ್ನು ಅರಿತು ಅವರು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲ್ಲಿನ ಅಧಿಕಾರಿಗಳಿಗೆ ನೀಡಿದ ಜವಾಬ್ಧಾರಿ ಅನುಸಾರ ತುಂಬಾ ನೊಂದವರ, ರೌಡಿಯಾಗದಿದ್ದರೂ ಆ ಹೆಸರಲ್ಲಿ ಸೇರಿಕೊಂಡು ಪೊಲೀಸರ ಕರೆಗಳಿಗೆ ಸದಾ ಹೋಗಿ ಬರುತ್ತಿದ್ದ ಬಹಳಷ್ಟು ಜನರಿಗೆ ಈಗ ರಿಲೀಫ್ ಸಿಕ್ಕಿದೆ. ಅವರು ಮತ್ತೆ ಇಂತಹ ಕೃತ್ಯಗಳಲ್ಲಿ ಭಾಗವಹಿಸಬಾರದೆಂಬ ಷರತ್ತಿನೊಂದಿಗೆ ಆ ವಿಷಯದ ಬಗ್ಗೆ ಬಿಗ್ ರಿಲೀಫ್ ಸಿಕ್ಕಿರುವುದು ಲಕ್ಷ್ಮಿಪ್ರಸಾದ್ ಅವರ ಕಳಕಳಿಯ ಕಾರ್ಯ ಎಂದು ಅಲ್ಲಿ ನೋವುಂಡವರ ಮಾತಾಗಿದೆ.


ರೌಡಿ ಪಟ್ಟಿ ಎಂಬ ಗೂಡಿನೊಳಗೆ ಬಂಧಿಯಾಗಿದ್ದವರ ಹೊಸ ಬದುಕಿಗೆ, ಬದಲಾವಣೆಗೆ, ಹೊಸತನಕ್ಕೆ ಅವಕಾಶ ನೀಡಿದ ಜಿಲ್ಕಾ ರಕ್ಷಣಾಧಿಕಾರಿಗಳನ್ನು ಅಭಿನಂದಿಸುತ್ತಲೇ, ಮುಂದಿನ ಹೊಸತನದ ಬದುಕಿಗೆ ಕಾಲಿಟ್ಟ ಶೇ. 90 ರಷ್ಟು ಜನ ಹೊಸ ಬದುಕಿನ ಸೊಗಸಾದ ಕನಸಿನೊಂದಿಗೆ ಅಭಿನಂದಿಸಿದ್ದಾರೆ ಎಂದು ತಿಳಿದು ಬಂದಿದೆ.


ಜಿಲ್ಲೆಯಲ್ಲಿ 1423 ಜನರಿಗೆ ಈ ಅವಕಾಶ ದೊರೆತಿದ್ದು, ಇದರಲ್ಲಿ ವಯಸ್ಸಾದವರು, ಸಬ್ಯ ಸಂಸಾರದವರು ಹೆಚ್ಚಾಗಿದ್ದರು. ರೌಡಿ ಪಟ್ಟಿ ಹೆಸರು ಸಾಕಷ್ಟು ಕಿರಿಕಿರಿ ಉಂಟು ಮಾಡಿತ್ತು.
ಗಣಪತಿ, ಹಿಂದೂ ಮುಸ್ಲಿಂ ಗಲಾಟೆ, ದಾರ್ಮಿಕ ಗಲಭೆ ಸೇರಿದಂತೆ ಐದಕ್ಕೂ ಹೆಚ್ಚು ದೂರಿನಲ್ಲಿದ್ದವರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಇದು ಹಿಂದಿನ ಎಸ್ಪಿ ಅರುಣ್ ಚಕ್ರವರ್ತಿ ಅವರ ಅವಧಿಯಿಂದ ಚರ್ಚೆಗೆ ಬಂದಿತ್ತು.

Exit mobile version