ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಪರವಾನಿಗೆ ರಹಿತ ಅಕ್ಕಿಯ ಸುಮಾರು ಚೀಲಗಳನ್ನು ಸಂಗ್ರಹಿಸಿದ್ದ ಪ್ರಕರಣವನ್ನು ಹೊಳೆಹೊನ್ನೂರು ಪೊಲೀಸ್ ಇನ್ಸ್ ಸ್ಪೆಕ್ಟರ್ ಆರ್. ಎಲ್. ಲಕ್ಷ್ಮಿಪತಿ, ಪಿಎಸ್ ಐ ಸುರೇಶ್ ನೇತೃತ್ವದ ತಂಡ ಬೇಧಿಸಿ ಅಕ್ಕಿಯನ್ನು ವಶಕ್ಕೆ ಪಡೆದಿದೆ.
ಪಿ.ಐ ಹೊಳೆಹೊನ್ನೂರು ರವರಿಗೆ ಶಿವಮೊಗ್ಗ ತಾಲ್ಲೂಕು ತರಗನಹಳ್ಳಿ ಗ್ರಾಮದ ಮಲ್ಲಿಕಮ್ಮ ಕೋಂ ಮಂಜುನಾಥ ಎಂಬುವರ ಮನೆಯಲ್ಲಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸರ್ಕಾರಕ್ಕೆ ಸೇರಿದ ಅಕ್ಕಿಯನ್ನು ದಾಸ್ತಾನು ಮಾಡಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿ.ಎಸ್ ಐ ಹೊಳೆಹೊನ್ನೂರು ಹಾಗೂ ಸಿಬ್ಬಂದಿಗಳೊಂದಿಗೆ ತರಗನಹಳ್ಳಿ ಸದರಿ ಮನೆಯ ಹತ್ತಿರ ಹೋಗಿ ಪರಿಶೀಲಿಸಿದಾಗ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ ತುಂಬಿರುವುದು ಪತ್ತೆಯಾಗಿರುತ್ತದೆ.
ಅಕ್ಕ ಪಕ್ಕದ ಜನರನ್ನು ವಿಚಾರ ಮಾಡಿದಾಗ ಜಾವಳ್ಳಿ ಮೋಹನ್ ಎಂಬುವರು ಅಕ್ಕಿಯನ್ನು ಬೇರೆ ಕಡೆಯಿಂದ ತಂದು ಸಂಗ್ರಹ ಮಾಡಿರುತ್ತಾರೆ. ಮನೆಯ ಮಾಲಿಕರಾದ ಮಂಜಮ್ಮ ಇವರು 2 ವರ್ಷದಿಂದ ಬೇರೆ ಕಡೆ ವಾಸವಾಗಿ ರುತ್ತಾರೆ.
ಅಲ್ಲಿ 40 ಕೆ.ಜಿ ಅಕ್ಕಿ ತುಂಬಿದ 205 ಚೀಲಗಳಿದ್ದು ಒಟ್ಟು 82 ಕ್ವಿಂಟಾಲ್ ಆಗಿದ್ದು ಇದರ ಒಟ್ಟು ಮೌಲ್ಯ 1,88,600/- ರೂ ಆಗಿದ್ದು ಅದನ್ನು ವಶಪಡಿಸಿಕೊಂಡು ಆರೋಪಿ ಜಾವಳ್ಳಿ ಮೋಹನ್ ಮೇಲೆ ಅಪರಾದ ಸಂಖ್ಯೆ 0038/2022 ಕಲಂ 3 ಮತ್ತು 7 ಇ.ಸಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.