Site icon TUNGATARANGA

ಬಿಜಿಎಸ್ ಶಾಲಾ ಕಾಲೇಜಿನಲ್ಲಿ ೭೩ನೇ ಗಣರಾಜ್ಯೋತ್ಸವದಲ್ಲಿ ಪತ್ರಕರ್ತ ಜಿ.ಸಿ.ಸೋಮಶೇಖರ್

ಭಾರತೀಯರಾದ ನಾವುಗಳು ಬಲಿಷ್ಟವಾದ ಸಂವಿಧಾನವನ್ನು ಹೊಂದಿದ್ದೇವೆ : ಸೋಮಶೇಖರ್ ಜಿ.ಸಿ.
ಶಿವಮೊಗ್ಗ : ಭಾರತೀಯರಾದ ನಾವುಗಳು ಬಲಿಷ್ಟವಾದ ಸಂವಿಧಾನವನ್ನು ಹೊಂದಿದ್ದೇವೆಎಂದು ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಿ.ಸಿ.ಸೋಮಶೇಖರ್ ಹೇಳಿದರು.


ನಗರದ ಗುರುಪುರದಲ್ಲಿರುವ ಬಿಜಿಎಸ್ ಶಾಲಾ ಕಾಲೇಜಿನಲ್ಲಿ ೭೩ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ವರ್ಷದಲ್ಲಿಯೇ ನಮ್ಮದೇಆದ ಸಂವಿಧಾನವನ್ನು ರಚಿಸಿಕೊಳ್ಳುವ ಸಲುವಾಗಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಮಿತಿಯೊಂದನ್ನುರಚಿಸಲಾಯಿತು ಎಂದರು.
ಸತತ ಎರಡೂವರೆ ವರ್ಷಗಳ ಕಾಲ ಅಧ್ಯಯನ ನಡೆಸಿದ ಸಮಿತಿರಾಷ್ಟ್ರದ ಪ್ರತಿಯೊಬ್ಬ ನಾಗರೀಕರಿಗೂ ಅನುಕೂಲವಾಗುವಂತಹ ಸಂವಿಧಾನದ ವರದಿಯನ್ನು ನೀಡಿತು. ೧೯೫೦ ಜನವರಿ ೨೬ರಂದು ಅದನ್ನು ಅನುಷ್ಟಾನಗೊಳಿಸಲಾಯಿತು ಎಂದು ವಿವರಿಸಿದರು.


ನಮ್ಮದೇಶದ ಕಚೇರಿಗಳು ಹೇಗೆ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳ ಕರ್ತವ್ಯವೇನು? ಶಾಲಾ ಕಾಲೇಜುಗಳು ಹೇಗೆ ಕಾರ್ಯ ನಿರ್ವಹಿಸಬೇಕು ? ಇವೆಲ್ಲವುಗಳಿಗೆ ಕಾನೂನಿನ ಚೌಕಟ್ಟನ್ನುರೂಪಿಸುವ ಸಲುವಾಗಿ ಸಂವಿಧಾನವನ್ನುಜಾರಿಗೆತರಲಾಯಿತುಎಂದಅವರು, ವಿಶ್ವದಯಾವುದೇರಾಷ್ಟ್ರಇಂತಹ ಬಲಿಷ್ಟವಾದ ಸಂವಿಧಾನ ಹೊಂದಿರಲು ಸಾಧ್ಯವಿಲ್ಲ ಎಂದರು.
ಸಮಾಜದಲ್ಲಿನ ಯಾವೊಂದು ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಸಂವಿಧಾನದಲ್ಲಿ ಶಿಕ್ಷಣದ ಹಕ್ಕನ್ನು ನೀಡಲಾಗಿದೆ. ಅಲ್ಲದೇ ಸಾಕಷ್ಟು ಸವಲತ್ತುಗಳನ್ನು ಕೂಡಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಾದ ನೀವುಗಳು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಸದೃಢ ಮತ್ತು ಬಲಿಷ್ಟ ಭಾರತವನ್ನುಕಟ್ಟುವ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಆ ಮೂಲಕ ಭಾರತವನ್ನು ವಿಶ್ವದಲ್ಲಿಯೇಅತ್ಯಂತಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಮಾತನಾಡಿ, ನಮ್ಮ ಕೆಲಸ ಕಾರ್ಯಗಳಿಗೆ ಕಾನೂನಿನ ಚೌಕಟ್ಟನ್ನು ರೂಪಿಸಿಕೊಳ್ಳುವುದು ಸಂವಿಧಾನವಾಗಿದೆ. ಪ್ರತಿಯೊಬ್ಬರೂಕೂಡ ಸಂವಿಧಾನದಅಡಿಯಲ್ಲಿಯೇಕಾರ್ಯ ನಿರ್ವಹಿಸಬೇಕು. ಹಾಗೂ ಜೀವನ ನಡೆಸಬೇಕುಎಂದು ಹೇಳಿದರು.
ಸಮಾರಂಭದಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ ಮಾತನಾಡಿ, ಭಾರತದ ಸಂವಿಧಾನದಲ್ಲಿಎಲ್ಲರಿಗೂ ಪ್ರಾತಿನಿಧ್ಯ ನೀಡಲಾಗಿದೆ. ಈ ಸಂವಿಧಾನವನ್ನುಗೌರವಿಸುವುದು ಹಾಗೂ ಅದರಚೌಕಟ್ಟಿನಲ್ಲಿಕಾರ್ಯ ನಿರ್ವಹಿಸುವುದು ನಮ್ಮಕರ್ತವ್ಯವಾಗಿದೆಎಂದರು.
ಕಾರ್ಯಕ್ರಮದಲ್ಲಿಉಪನ್ಯಾಸಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಸಂಯೋಜಕ ತಿಮ್ಮೇನಹಳ್ಳೀ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Exit mobile version