Site icon TUNGATARANGA

ತೀರ್ಥಹಳ್ಳಿ/ ಯಡೇಹಳ್ಳಿ-ಬದನೇಹಿತ್ಲುವಿನಲ್ಲಿ ವಿಶೇಷ ರೀತಿ ಗಣರಾಜ್ಯೋತ್ಸವ

ತೀರ್ಥಹಳ್ಳಿ :
ಚುಟುಕು ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಠಶಾಲೆ ಯಡೇಹಳ್ಳಿ-ಬದನೇಹಿತ್ಲು, ನಮ್ಮೂರುಎಕ್ಸ್‌ಪ್ರೆಸ್ ಸುದ್ದಿ ಮಾಧ್ಯಮ, ಸ್ಥಳೀಯ ಪತ್ರಿಕಾ ವರದಿಗಾರರುಗಳ ಸಂಯುಕ್ತ ಆಶ್ರಯದಲ್ಲಿ ೭೩ನೇ ಗಣರಾಜ್ಯೋತ್ಸವವನ್ನು ಬದನೇಹಿತ್ಲು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಮತಾರವರು ಧ್ವಜಾರೋಹಣವನ್ನು ಮಾಡಿದರು.
ನಮ್ಮೂರುಎಕ್ಸ್‌ಪ್ರೆಸ್ ಸುದ್ದಿ ಮಾಧ್ಯಮ

ದವರು ಶಾಲಾ ಮಕ್ಕಳಿಗೆ ಪರಿಕರಗಳನ್ನು ವಿತರಿಸಿದರು.ಸಿರಿಗನ್ನಡ ವೇದಿಕೆ, ಚುಟುಕು ಸಾಹಿತ್ಯ ಪರಿಷತ್‌ಇವರಿಂದ ಶಾಲೆಗೊಂದು ಹೊಸ ಚಿಗುರು ಕಾರ್ಯಕ್ರಮವನ್ನು ವೇದಿಕೆ ಮುಖಾಂತರ ಗಿಡಗಳಿಗೆ ನೀರುಉಣಿಸುವುದರ ಮುಖೇನ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬಟ್ಟೆಕೈಚೀಲ, ಮಕ್ಕಳಿಗೆಬಹುಮುಖ್ಯವಾಗಿ ಪೆನ್ನು ಪ್ರಶಂಸನಾಪತ್ರ, ಕರವಸ್ತ್ರ, ಹಲೆ ಬೇರು ಹೊಸ ಚಿಗುರು ಚುಟುಕು ಸಾಹಿತ್ಯ ಕಿರು ಪುಸ್ತಕ, ಒಣ ದ್ರಾಕ್ಷಿಯನ್ನು ವಿತರಿಸಿದರು.
ಚುಟುಕು ಸಾಹಿತ್ಯ ಪರಿಷತ್‌ಅಧ್ಯಕ್ಷ ಸುರೇಶ್‌ಕೆ.ಎನ್. ಸಾಲೂರು ಮಾತನಾಡುತ್ತಾ, ಪರಿಸರ ಮತ್ತು ಸಾಮಾಜಿಕ ಕಳಕಳಿಯು ಪ್ರತಿಯೊಬ್ಬ ನಾಗರೀಕರನಿಗೂ ಪ್ರಾರಂಭದಿಂದಲೇತನ್ನಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸೂಕ್ಷ್ಮಮವಾಗಿ ಪರಿಚಯಿಸಿ ಸರ್ವರಿಗೂ ಶುಭಕೋರಿದರು.
ಶಾಲಾ ಮುಖ್ಯ ಶಿಕ್ಷಕಿ ಅನುಮತಿಯವರುಗಣರಾಜ್ಯೋತ್ಸವದ ವಿಷಯವಾಗಿ ಸಭೆಯಲ್ಲಿ ತಿಳಿ ಹೇಳಿದರು.ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಸುಲೋಚನ ಮುಳುಬಾಗಿಲು ಪ್ರಾಸ್ತಾವಿಕ ಮಾತುಗಳನ್ನಾಡಿರು.
ಮುಖ ಅತಿಥಿಯಾಗಿ ಆಗಮಿಸಿದ ಚುಟುಕು ಸಾಹಿತಿಗಳಾದ ಕೆ.ಕೆ. ರಾಘವೇಂದ್ರಗಾರ್ಡರಗದ್ದೆಇವರು ಪುನೀತ್‌ರಾಜ್‌ಕುಮಾರ್‌ರವರಚುಟುಕು, ಚಿಕ್ಕ ಹಾಸ್ಯ ಕಥೆಗಳನ್ನು ಹೇಳುವ ಮೂಲಕ ಮನರಂಜಿಸಿದರು. ಸ್ವಾಗತ ನಿರೂಪಣೆಯನ್ನು ಶಿಕ್ಷಕಿ ಸುರೇಖಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿಸಿ ಬಿಸಿಯೂಟ ಸಹಾಯಕಿ, ಅಂಗನವಾಡಿ ಕಾರ್ಯಕರ್ತೆಯರು, ಪೋಷಕವೃಂದ, ವಿದ್ಯಾರ್ಥಿಗಳು, ಅಂಗನವಾಡಿ ಪುಟಾಣಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version