Site icon TUNGATARANGA

ಮತದಾನದ ಹಕ್ಕಿನ ಕುರಿತು ಹೆಚ್ಚಿನ ಅರಿವು ಅವಶ್ಯಕ: ನ್ಯಾ. ಮುಸ್ತಫಾ ಹುಸೇನ್.ಎಸ್.ಎ

ಶಿವಮೊಗ್ಗ : ನಮ್ಮನ್ನು ಆಳುವ ಒಬ್ಬ ಸಮರ್ಥ ನಾಯಕನನ್ನು ನಾವೇ ಆರಿಸುವ ಮತ ದಾನದ ಹಕ್ಕು ಅತ್ಯಂತ ಮಹತ್ವವುಳ್ಳ ದ್ದಾಗಿದೆ. ಆದರೆ ಈ ಸಾಂವಿಧಾನಿಕ ಹಕ್ಕಿನ ಮಹತ್ವದ ಕುರಿತು ಇನ್ನೂ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀ ಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಫಾ ಹುಸೇನ್.ಎಸ್.ಎ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


೧೯೫೦ ರಲ್ಲಿ ಸ್ಥಾಪನೆಯಾದ ಚುನಾ ವಣಾ ಆಯೋಗ ಅಂದಿನಿಂದ ಇಲ್ಲಿಯ ವರೆಗೆ ನಮ್ಮ ರಾಷ್ಟ್ರದಲ್ಲಿ ಎಲ್ಲ ಚುನಾವಣೆ ಗಳನ್ನು ನಡೆಸುತ್ತಾ ಬಂದಿದೆ. ೧೮ ವರ್ಷ ತುಂಬಿದ ಎಲ್ಲ ಯುವಜನತೆಗೆ ಮತದಾನ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಈ ಹಕ್ಕು ಅತ್ಯಂತ ಜವಾಬ್ದಾರಿ ಯುತ ಮತ್ತು ಮಹತ್ವವುಳ್ಳದ್ದಾಗಿದೆ. ಆದರೆ ಈ ಸಾಂವಿಧಾನಿಕ ಹಕ್ಕಿನ ಮಹತ್ವದ ಕುರಿತು ಇನ್ನೂ ಹೆಚ್ಚಿನ ಜನರಿಗೆ ಅರಿವಿಲ್ಲ ಎಂಬುದು ಇತ್ತೀಚಿನ ಚುನಾವಣೆಯಲ್ಲಿ ಆಗುತ್ತಿರುವ ಮತದಾನದ ಪ್ರಮಾಣದಿಂದ ತೋರುತ್ತಿದೆ.


ಪ್ರತಿ ಚುನಾವಣೆಯಲ್ಲಿ ನಾವು ಕಡಿಮೆ ಮತದಾನ ಆಗುತ್ತಿರುವುದನ್ನು ಕಾಣು ತ್ತಿದ್ದೇವೆ. ಅಂದರೆ ನಮ್ಮ ಹಕ್ಕನ್ನು ನಾವು ಚಲಾಯಿಸುವಲ್ಲಿ ಹಿಂದಿದ್ದೇವೆ, ನಿರ್ಲಕ್ಷ್ಯ ವಹಿಸಿದ್ದೇವೆ ಎಂದರ್ಥ. ಆದ ಕಾರಣ ನಾವೆಲ್ಲ ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ. ಮತದಾನದ ಹಕ್ಕನ್ನು ನಾವು ಜಾಗರೂಕತೆಯಿಂದ ಚಲಾಯಿ ಸಿದಾಗ ಮಾತ್ರ ಉತ್ತಮ ಆಡಳಿತ ಸಾಧ್ಯವಾಗುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ. ಆರ್ ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇ ಕಾದರೆ ಪ್ರತಿಯೊಬ್ಬ ಪ್ರಜೆಯು ಮತದಾನ ಸೇರಿದಂತೆ ಈ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕೇವಲ ಮತದಾ ನದ ಹಕ್ಕು ಚಲಾಯಿಸಿದರೆ ಮಾತ್ರ ಸಾಲದು. ೧೮ ವರ್ಷ ತುಂಬಿದ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಬೇಕು. ಬೇರೆ ಪ್ರದೇಶಗಳಿಗೆ ವಲಸೆ ಹೋದವರು, ವರ್ಗಾವಣೆ, ತೀರಿಹೋದ ವರ ಹೆಸರನ್ನು ಅರ್ಜಿ ನೀಡಿ ಪಟ್ಟಿಯಿಂದ ತೆಗೆಸಬೇಕು. ಹೊಸದಾಗಿ ಊರಿಗೆ ಬಂದ ವರ, ವಿಳಾಸ ಬದಲಾವಣೆ ಇತರೆಯನ್ನು ಸೇರಿಸಬೇಕು.


ಭಾರತ ಚುನಾವಣಾ ಆಯೋಗವು ಚುನಾವಣೆಗಳಿಗೆ ಸಂಬಂಧಿಸಿದ ಪ್ರತಿ ಯೊಂದು ವಿಚಾರವನ್ನು ಗಮನಿಸು ತ್ತಿರುತ್ತದೆ. ಹಾಗೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪ್ರತಿ ನಾಗರೀಕರು ಮತದಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಶ್ಯ ವಾದ ಕ್ರಮಗಳನ್ನು ಸಹ ಕೈಗೊಳ್ಳುತ್ತಿದೆ. ಮೊದಲೆಲ್ಲ ಮತದಾರರ ಪಟ್ಟಿ ಬಗ್ಗೆ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳ ಬಳಿ ಕೇಳಿ ಪಡೆಯಬೇಕಿತ್ತು. ಆದರೀಗ ಚುನಾವಣಾ ಆಯೋಗ ಆಪ್ ಸಿದ್ದಪಡಿಸಿದ್ದು , ಮಾಹಿತಿ ಪಡೆಯುವುದನ್ನು ಸರಳಗೊ ಳಿಸಿದೆ. ಹಾಗೂ ಯುವ ಮತದಾರರು ಸೇರಿದಂತೆ ಎಲ್ಲರೂ ಮತದಾನ ಚೀಟಿ ಯನ್ನು ಸುಲಭವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹು ದಾಗಿದ್ದು, ಎಲ್ಲರೂ ಇದರ ಉಪಯೋಗ ಪಡೆಯಬೇಕೆಂದರು.
ಎಲ್ಲ ಪ್ರೌಢಶಾಲೆ, ಕಾಲೇಜುಗಳಲ್ಲಿ ಮತದಾನ ಮತ್ತು ಚುನಾವಣೆ ಬಗ್ಗೆ ಅರಿವು ಮೂಡಿಸಲು ಎಲೆಕ್ಟರಲ್ ಲಿಟರಸಿ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ. ಕ್ಯಾಂಪಸ್ ಅಂಬಾಡಿಸರ್‌ಗಳನ್ನು ನೇಮಿಸಲಾಗಿದೆ. ಹಾಗೂ ಚುನಾವಣಾ ಅವ್ಯವಹಾ ರಗಳ ತಡೆಗಾಗಿ ಚುನಾವಣಾ ಆಯೋಗ ನವೀನವಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ ಎಂದರು.


ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ಭಾರತ ಚುನಾವಣಾ ಆಯೋ ಗದ ಸಂಸ್ಥಾಪನಾ ದಿನವನ್ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಎಂದು ಆಚರಿಸುವ ಮೂಲಕ ಮತದಾನ ಕುರಿತು ಜಾಗೃತಿ ಮತ್ತು ಇದರ ಮಹತ್ವವನ್ನು ತಿಳಿಸ ಲಾಗುತ್ತಿದೆ. ಕೇವಲ ಐಡಿ ಪ್ರೂಫ್‌ಗಾಗಿ ಮತದಾರರ ಚೀಟಿ ಪಡೆಯುವಂತೆ ಆಗಬಾರದು. ನಮ್ಮ ಮತದಾನದ ಹಕ್ಕು ಚಲಾಯಿಸಲು ಅದರ ಸದ್ಬಳಕೆ ಆಗಬೇಕು. ಪ್ರತಿಯೊಂದು ಮತವೂ ಅಮೂಲ್ಯವಾ ಗಿದ್ದು, ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ನಾನು ಮತದಾನ ಮಾಡಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗಣ್ಯರು ಯುವ ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ವಿತರಿಸಿದರು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ, ಚಿತ್ರಕಲೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಿದರು. ಹಾಗೂ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಮತಗಟ್ಟೆ ಅಧಿಕಾರಿ ಪಾಲಾಕ್ಷರನ್ನು ಗೌರವಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಮತದಾನ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಾನಗರಪಾಲಿಕೆ ಆಯುಕ್ತರಾದ ಚಿದಾನಂದ ಎಸ್. ವಟಾರೆ ಸ್ವಾಗತಿಸಿದರು. ಚುನಾವಣೆ ಶಾಖೆಯ ತಹಶೀಲ್ದಾರ್ ಮಂಜುಳಾ ಭಜಂತ್ರಿ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version