Site icon TUNGATARANGA

ವರಮಹಾಲಕ್ಷ್ಮಿ ಆಚರಣೆಯ ನಡುವಿನ ಪೊಲೀಸ್ ಇಲಾಖಾ ಸೂಚನೆ ಗಮನಿಸಿ

ನಾಳಿನ ಶ್ರೀ ವರಮಹಾಲಕ್ಷ್ಮಿ ಹಬ್ಬವನ್ನು ಶಿವಮೊಗ್ಗ ಜಿಲ್ಲೆಯಾದ್ಯಂತ ಆಚರಣೆ ಮಾಡಲಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸಾರ್ವಜನಿಕರು ಶಾಂತ ರೀತಿಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುವ ಸಲುವಾಗಿ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿ ಕೋರಿದೆ.

1.ಬ್ಯಾಂಕಿನಿಂದ ಒಡವೆ ಮತ್ತು ಹಣವನ್ನು ತಂದು ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಬ್ಯಾಂಕಿನಿಂದ ಹಣ ಮತ್ತು ಒಡವೆಗಳನ್ನು ತರುವಾಗ ಹೆಚ್ಚಿನ ಜವಾಬ್ದಾರಿಯಿಂದ ಇಟ್ಟು ಕೊಳ್ಳುವುದು.
2.ಹೆಣ್ಣು ಮಕ್ಕಳು ಒಡವೆಗಳನ್ನು ಹಾಕಿಕೊಂಡು ಹೋಗುವಾಗ ಬಹಳ ಜಾಗೃತರಾಗಿರಲು ತಿಳಿಸಿದೆ, ಅವಶ್ಯಕತೆ ಇದ್ದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗುವುದು
3.ಸರಗಳ್ಳರು ಹಾಗೂ ಕಳ್ಳಕಾಕರುಗಳ ಮೇಲೆ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹೆಚ್ಚಿನ ನಿಗಾವಣೆ ಇಡಲಾಗಿರುತ್ತದೆ. ಯಾರಾದರು ಅನುಮಾನಾಸ್ಪದ ವ್ಯಕ್ತಿಗಳ ಚಲನ ವಲನ ಕಂಡು ಬಂದಲ್ಲಿ ತಕ್ಷಣ ಪೂಲೀಸ್ ಕಂಟ್ರೋಲ್ ರೊಂಗೆ ಕರೆ ಮಾಡಿ ತಿಳಿಸತಕ್ಕದ್ದು.
4.ಬ್ಯಾಂಕಿನಿಂದ ಒಡವೆಗಳನ್ನು ಹಾಗೂ ಹಣವನ್ನು ತರುವಾಗ ಮತ್ತು ಪುನಾಃ ಬ್ಯಾಂಕಿನಲ್ಲಿ ಜಮಾ ಮಾಡುವಾಗ ಹೆಚ್ಚಿನ ಮುತುವರ್ಜಿ ವಹಿಸುವುದು.
5.ಪೊಲೀಸ್ ಇಲಾಖೆಯಿಂದ 24 ಗಂಟೆಗಳ ಕಾಲ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು, ತಪಾಸಣೆಯನ್ನು ನಡೆಸಲಾಗುತ್ತಿದೆ
6.ಕ್ರೈಂ ಸಿಬ್ಬಂದಿಗಳನ್ನು ಹಾಗೂ ಸಾದಾ ಉಡುಪಿನಲ್ಲಿ ಸಿಬ್ಬಂದಿಗಳನ್ನು ನೇಮಿಸಿ ಸರಗಳ್ಳರುಗಳ ಮೇಲೆ ನಿಗಾವಣೆ ಇಡಲಾಗಿದೆ.
7.ಸಾರ್ವಜನಿಕರು ವರಮಹಾಲಕ್ಷ್ಮಿ ಹಬ್ಬದ ಸಂಧರ್ಭದಲ್ಲಿ ಹಣ ಮತ್ತು ಒಡವೆಗಳನ್ನು ಕಿಟಿಕಿ ಪಕ್ಕದಲ್ಲಿ ಇಟ್ಟು ಹೊರಗೆ ಹೋಗಬಾರದು, ಒಡವೆ ಜೋಪಾನ ಬಗ್ಗೆ ಸದಾ ಜಾಗರೂಕರಾಗಿರಬೇಕು.
8.ಪೊಲೀಸ್ ಇಲಾಖೆಯು ಸಾರ್ವಜನಿಕ ಹಿತದೃಷ್ಟಿಯಿಂದ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ಹೆಚ್ಚಿನ ನಿಗಾವಣೆಯನ್ನು ಇಡಲಾಗಿರುತ್ತದೆ.

   *ಸಾರ್ವಜನಿಕರು ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅವಗಡಗಳು ಮತ್ತು ಕಾನೂನು ಉಲ್ಲಂಘನೆ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ಜಿಲ್ಲಾ ನಿಸ್ತಂತು ಘಟಕ, ಶಿವಮೊಗ್ಗಕ್ಕೆ ಕರೆ ಮಾಡಿ ಮುಕ್ತವಾಗಿ ಸಮಸ್ಯೆಗಳನ್ನು ತಿಳಿಸಲು ಅವಕಾಶವಿರುತ್ತದೆ.*

ದೂರವಾಣಿ ಸಂಖ್ಯೆ ಹಾಗೂ ಪೊಲೀಸ್ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ.
1) 08182- 261400- ಜಿಲ್ಲಾ ರಕ್ಷಣಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ.
2) 08182-261402- ಹೆಚ್ಚುವರಿ ರಕ್ಷಣಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ.
3) 08182- 261413 08182- 270521 – ಜಿಲ್ಲಾ ಕಂಟ್ರೋಲ್ ರೂಂ, ಜಿಲ್ಲಾ ಪೊಲೀಸ್ ಕಛೇರಿ, ಶಿವಮೊಗ್ಗ
4) 08182- 261404- ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಉಪ ವಿಭಾಗ
5) 08181- 220388- ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ
6) 08183- 226082- ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ
7) 08187- 222442- ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ

8) 08282-274252- ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ

9) 08184- 272122- ವೃತ್ತ ನಿರೀಕ್ಷಕರು, ಸೊರಬ ಉಪ ವಿಭಾಗ

Exit mobile version