Site icon TUNGATARANGA

ಡಿಸಿಐಬಿ ಪೊಲೀಸರ ಬರ್ಜರಿ ದಾಳಿ: ಜೂಜಾಡುತ್ತಿದ್ದ 11ಜನರ ಜೊತೆ 12ಲಕ್ಷ ನಗದು ವಶ

ಶಿವಮೊಗ್ಗ, ಜು.30:
ಕಳೆದ ಹತ್ತು ದಿನಗಳಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ನಡೆಯುತ್ತಿರುವ ಎಲ್ಲಾ ಬಗೆಯ ಅಕ್ರಮ ಚಟುವಟಿಕೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಅದರಲ್ಲೂ ಜಿಲ್ಲಾ ರಕ್ಷಣಾಧಿಕಾರಿಗಳ ಆಡಳಿತದೊಳಗಿನ ಡಿಸಿಐಬಿ ಪೊಲೀಸ್ ತಂಡ ಬಹುದೊಡ್ಡ ದಾಳಿ ನಡೆಸಿ ಅಕ್ರಮಗಳನ್ನು ಹತ್ತಿಕ್ಕುತ್ತಿದೆ.


ಜಿಲ್ಲಾ ಪೊಲೀಸ್ ಕಚೇರಿಯ DCIB ತಂಡದಿಂದ ಭರ್ಜರಿ ದಾಳಿ ನಡೆದಿದ್ದು, ಇಲ್ಲಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಟ್ಟೆಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಯಾದಂತಹ ಇಸ್ಪೀಟ್ ನಲ್ಲಿ ತೊಡಗಿದ್ದ 11 ಜನರನ್ನ ಬಂಧಿಸಲಾಗಿದೆ. ಜೂಜಾಟಕ್ಕೆ ಬಳಸಲಾಗಿದ್ದ ಒಟ್ಟು 12 ಲಕ್ಷ ರೂ ನಗದು ಹಣವನ್ನ ವಶಪಡಿಸಿಕೊಳ್ಳಲಾಗಿದೆ.
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಟ್ಟೆಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಜನರು ಗುಂಪು ಸೇರಿಕೊಂಡು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿಸಿಐಬಿ ನಿರೀಕ್ಷಕ ಕುಮಾರಸ್ವಾಮಿ, ನೇತೃತ್ವದಲ್ಲಿ, ವಿನೋಬನಗರ ಪೊಲೀಸ್ ಠಾಣೆಯ ಪಿಎಸ್ಐ ಉಮೇಶ್ ಕುಮಾರ್, ಹಾಗೂ ಸಿಬ್ಬಂದಿಗಳನ್ನೊಳಗೊಂಡ ಜಿಲ್ಲಾ ತಂಡವನ್ನು ರಚಿಸಿ ಇಂದು ದಾಳಿ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 11 ಜನ ಆರೋಪಿತರನ್ನು ಬಂಧಿಸಿ, ಆರೋಪಿತರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 12,03,240/- (ರೂಪಾಯಿ ಹನ್ನೆರಡು ಲಕ್ಷದ ಮೂರು ಸಾವಿರದ ಎರಡು ನೂರ ನಲವತ್ತು ) ನಗದು ಹಣ , 11 ಮೊಬೈಲ್ ಫೋನ್ ಗಳು ಹಾಗೂ ಇಸ್ಪೀಟು ಕಾರ್ಡ್ ಗಳನ್ನು ಅಮಾನತ್ತು ಪಡಿಸಿಕೊಂಡು, ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

Exit mobile version