ಶಿವಮೊಗ್ಗ :
ಈ ವರುಷದ ಮೊದಲ ಕೋತಿಜ್ವರದ ಪ್ರಕರಣ ಇಂದು ಪತ್ತೆಯಾಗಿದೆ. ಡಿಸೆಂಬರ್ ನಿಂದ ಫೆಬ್ರವರಿ ಅಂತ್ಯದವರೆಗೆ ಮಲೆನಾಡು ಭಾಗದಲ್ಲಿ ಬಾರೀ ಆತಂಕ ಹುಟ್ಟಿಸುತ್ತಿದ್ದ ಈ ಕೆಎಫ್ ಡಿ ಪ್ರಕರಣದಲ್ಲಿ ನಿನ್ನೆ ಪರಿಶೀಲಿಸಿದ ಸುಮಾರು 75 ಜನರಲ್ಲಿ ಓರ್ವರಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಇರುವಿಕೆಯನ್ನು ಸಾಭೀತುಪಡಿಸಿದೆ.
ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆಯ ನಿರಂತರ ಪ್ರಯತ್ನದ ಫಲವಾಗಿ ಈ ಬಾರೀ ಸಂಪೂರ್ಣ ನಿಯಂತ್ರಣಕ್ಕೆ ಬರಲಾಗಿತ್ತು. ಕಳೆದ ಮೂರು ವರುಷದ ಹಿಂದೆ 343 ಇದ್ದ ಪ್ರಕರಣ ಅದರ ಮರುವರ್ಷ 180 ಕ್ಕೆ ಕುಗ್ಗಿತ್ತು. ಅಂತೆಯೇ ಕಳೆದ ವರ್ಷ 23 ಕ್ಕೆ ಸೀಮಿತವಾಗಿ ಮಲೆನಾಡು ಭಾಗದಲ್ಲಿ ನ್ಮದಿಯ ವಾತಾವರಣ ಮೂಡಿಸಿತ್ತು.ಈ ಬಾರೀ ಜನವರಿ ಮದ್ಯಭಾಗದಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿದೆ.
ತೀರ್ಥಹಳ್ಳಿ ತಾಲ್ಲೂಕಿನ ಕುಡಿಗೆ ಗ್ರಾಮದ 57 ವರ್ಷದ ಮಹಿಳೆಗೆ ಕೋತಿ ಜ್ವರ ಎಂದೇ ಕರೆಯುವ ಕ್ಯಾಸನೂರು ಅರಣ್ಯ ಕಾಯಿಲೆ (KFD) ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಆರೋಗ್ಯ ಅಧಿಕಾರಿ ರಾಜೇಶ್ ಸುರಗಿಹಳ್ಳಿ ಈ ಬಗ್ಗೆ ತುಂಗಾತರಂಗ ಪತ್ರಿಕೆ ಯೊಂದಿಗೆ ಮಾತಮಾಡಿದ್ದು, ‘ರೋಗಿಯು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ನಂತರ ಅವ್ರು ರಕ್ತದ ಮಾದರಿಯನ್ನ ಕೆಎಫ್‌ಡಿಗಾಗಿ ಪರೀಕ್ಷೆಗೆ ಕಳಿಸಲಾಗಿದ್ದ, ಕೋತಿ ಜ್ವರ ದೃಢಪಟ್ಟಿದೆ’ ಎಂದರು.
ಪ್ರಸ್ತುತ ಮಹಿಳೆಗೆ ಎರಡೂ ವ್ಯಾಕ್ಸಿನ್ ಆಗಿದ್ದು, ಆರೋಗ್ಯವಾಗಿದ್ದಾರೆಂದು ತಿಳಿಸಿದರು.
ಕ್ಯಾಸನೂರು ಅರಣ್ಯ ರೋಗ (KFD) ಕ್ಯಾಸನೂರು ಅರಣ್ಯ ರೋಗದ ವೈರಸ್(Casanur forest disease virus)ನಿಂದ ಉಂಟಾಗುತ್ತದೆ. ಇದು ಪ್ರಾಥಮಿಕವಾಗಿ ಮಾನವರು ಮತ್ತು ಕೋತಿಗಳನ್ನ ಬಾಧಿಸುತ್ತದೆ. ಇನ್ನು ಈ ಕೆಎಫ್ ಡಿಯ ಪ್ರಮುಖ ಲಕ್ಷಣಗಳೆಂದ್ರೆ, ಚಳಿ, ಮುಂಭಾಗದ ತಲೆನೋವು, ದೇಹ ನೋವು ಮತ್ತು ಐದರಿಂದ 12 ದಿನಗಳವರೆಗೆ ತೀವ್ರ ಜ್ವರ ಇರುತ್ತೆ ಎಂದರು.