Site icon TUNGATARANGA

ರಾಜ್ಯದ ಗಾಂಜಾ ಚಟುವಟಿಕೆಗೆ ಸಂಪೂರ್ಣ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಸಿದ್ದ : ಆರಗ ಜ್ಞಾನೇಂದ್ರ

ಶಿವಮೊಗ್ಗ ಮಾದ್ಯಗಳೊಂದಿಗೆ ಮನಬಿಚ್ಚಿ ಮಾತನಾಡಿದ ಹೋಮ್ ಮಿನಿಸ್ಟರ್

ಶಿವಮೊಗ್ಗ, ಜ.೨೨:
ಶಿವಮೊಗ್ಗ ಸೇರಿದಂತೆ ರಾಜ್ಯದೆಲ್ಲೆಡೆ ಮಾದಕ ವಸ್ತು, ಗಾಂಜಾ, ಅಕ್ರಮ ಕಲ್ಲು ಗಣಿ, ಅನಧಿಕೃತ ಮರಳು ಸಾಗಣಿಕೆ ಸೇರಿದಂತೆ ಎಲ್ಲಾ ಅಹಿತಕರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ನಮ್ಮ ಪೊಲೀಸ್ ವ್ಯವಸ್ಥೆ ಸಕಲ ತಯಾರಿ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಂದಿನ ದಿನಮಾನಗಳಲ್ಲಿ ಅತಿ ಹೆಚ್ಚು ಯುವಕರು, ಅಪ್ರಾಪ್ತ ವಯಸ್ಸಿನ ಯುವಕರು ಗಾಂಜಾ ಸೇವನೆಗೆ ಮುಂದಾಗಿರುವುದು ದುರಂತ. ಇಲ್ಲಿಗೆ ಗಾಂಜಾ ವಿಶಾಖಪಟ್ಟಣ ಕಡೆಯಿಂದ ಬರುತ್ತಿದೆ ಎಂಬ ನಿಖರ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಅದರಲ್ಲೂ ಶಿವಮೊಗ್ಗದ ಪೊಲೀಸ್ ವ್ಯವಸ್ಥೆ ಗಾಂಜಾ ಸೇದುವವನಿಂದ, ಮಾರಾಟ ಮಾಡುವವನು, ವಿತರಿಸುವವರೆಗೆ ಸಂಪೂರ್ಣ ಜಾಲವನ್ನು ಬೇಧಿಸುತ್ತಿದ್ದಾರೆ. ಅತ್ತ ದಿನದ ೨೪ ಗಂಟೆಯು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅವರು ಇಂದು ಬೆಳಗ್ಗೆ ಶಿವಮೊಗ್ಗ ಪ್ರೆಸ್‌ಟ್ರಸ್ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ತಿಳಿಸಿದರು.

ಹೊಂ ಮಿನಿಸ್ಟರ್ ಗೇ ಹೆಲ್ಮೆಟ್ ದಂಡ ಬಿಡಿಸಲು ಕೇಳಿದ ಭೂಪ…! https://tungataranga.com/?p=8127 ನಗೆಚಾಟಿಯ ಓದಿ

ಶಿವಮೊಗ್ಗ ಜಿಲ್ಲೆಯಲ್ಲಿ ೪೦ ಪೊಲೀಸ್ ವಸತಿಗೃಹಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಅದರಲ್ಲಿ ತೀರ್ಥಹಳ್ಳಿಯಲ್ಲಿ ೧೨ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುವುದು.
ತೀರ್ಥಹಳ್ಳಿಯಲ್ಲಿರುವ ಹಳೆಯ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಜಿ+೩ ಮಾದರಿಯಲ್ಲಿ ವಿನೂತನವಾಗಿ ೪.೫೦ ಕೋಟಿ. ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ.
ತೀರ್ಥಹಳ್ಳಿಯ ಅಗ್ನಿಶಾಮಕದಳದ ನೂತನ ಕಟ್ಟಡ ನಿರ್ಮಾಣಕ್ಕೆ ೪ ಕೋಟಿ. ರೂಗಳನ್ನು ಬಿಡುಗಡೆ ಮಾಡಲಾಗಿದೆ.


ಮಾಧ್ಯಮಗಳೇ ನನಗೆ ಗುರುಗಳು
ಬಾರತೀಯ ಜನತಾ ಪಕ್ಷದ ಸದಸ್ಯನಾಗಿ ಸೋಲುಗಳಿಗೆ ಎದೆಗುಂದದೆ ಇಂದಿನ ಈ ಮಟ್ಟಕ್ಕೆ ಬೆಳೆದಿರಲು ಕಾರಣ ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಬೆಂಗಳೂರಿನ ಮಾದ್ಯಮದ ಸ್ನೇಹಿತರೇ ಕಾರಣ ಎಂದು ಹೇಳಿದ ಆರಗ ಜ್ಞಾನೇಂದ್ರ ಅವರು ನನ್ನ ಬಗ್ಗೆ ನನಗೆ ಕೆಲವೊಮ್ಮೆ ಆಶ್ಚರ್ಯವಾಗುತ್ತಿದೆ. ನಾನು ಗೃಹ ಸಚಿವನಾದಾಗ ಮೊದಲು ಒಂದಿಷ್ಟು ದಿನ ಆತಂಕವಿತ್ತು. ಆಗ ನನಗೆ ಆರ್‌ಎಸ್‌ಎಸ್ ಕಲಿಸಿಕೊಟ್ಟ ಪಾಠ, ಬಿಜೆಪಿಯ ಪ್ರಮುಖರ ಸಲಹೆಗಳು ಸಾಕಷ್ಟು ನೆರವಾದವು. ಅನ್ಯ ಇಲಾಖೆಗಳ ಸಚಿವ ಸ್ಥಾನಕ್ಕೂ ಗೃಹ ಖಾತೆಯ ಜವಾಬ್ದಾರಿಗೂ ಬಹಳಷ್ಟು ವ್ಯತ್ಯಾಸಗಳಿವೆ. ದಿನವಿಡಿ ಸದಾ ಜಾಗೃತಿಯಾಗಿರುವ ಅತಿ ಹೆಚ್ಚು ಭಾರಿ ಮಾದ್ಯಮಗಳಿಗೆ ಮಾಹಿತಿ ನೀಡುವ ಹೊಣೆಗಾರಿಕೆಯ ಜೊತೆ ರಕ್ಷಣೆಯ ಜವಾಬ್ದಾರಿಯಲ್ಲಿ ನಾವು ಸಕ್ರಿಯರಾಗಿದ್ದೇವೆ ಎಂದು ಹೇಳಿದರು.

ಳ್ಳಿಯ ಪದಗಳು ಹೃದಯ ಭಾಷೆಯಾಗಿರುತ್ತದೆ. ಅಂತಹ ಪದಗಳ ಮೂಲಕ ಮಾತನಾಡಿದಾಗ ಮೊದಲು ಕೆಲವೊಮ್ಮೆ ಗೊಂದಲವಾಗಿತ್ತು. ಅದಕ್ಕೆ ಕೆಲವರು ನೀಡಿದ ಸಲಹೆಯೇ ಒಂದು ಬದಲಾವಣೆಯನ್ನು ತಂದಿದೆ ಎಂದ ಅವರು ಮೊದಲಿನಿಂದಲೂ ದೇಶದ ಪರಿವರ್ತನೆಗೆ ದುಡಿಯಬೇಕು ಎನ್ನುವ ಮನೋಸ್ಥಿತಿಯಲ್ಲಿ ಬೆಳೆದ ನನಗೆ ಈ ಖಾತೆ ಹೆಚ್ಚಿನ ಹೊರೆಯಾಗಿಲ್ಲ ಎಂದರು.
ನಮ್ಮ ಪೊಲೀಸ್ ಇಲಾಖೆಯಲ್ಲಿ ತುಂಬಾ ಒಳ್ಳೆಯ ಅಧಿಕಾರಿಗಳು ಸಾಕಷ್ಟು ಜನರಿದ್ದಾರೆ. ಕೆಲ ಸಣ್ಣ, ಪುಟ್ಟ ಲೋಪಗಳಿವೆ. ಪೊಲೀಸರು ಪ್ರಾಮಾಣಿಕವಿಲ್ಲವಾದರೆ ನಾವು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ದೇಶದ ಗಡಿಯಲ್ಲಿ ಸೈನಿಕರಿದ್ದಂತೆ ದೇಶದ ಅಂತರಂಗದಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಕಾನೂನಿನ ಜೊತೆ ಮಾನವೀಯ ಚೌಕಟ್ಟಿನೊಳಗೆ ರಕ್ಷಣಾ ಇಲಾಖೆ ನಮ್ಮ ಸವಿದಿನಗಳನ್ನು ನೀಡುತ್ತಿದೆ. ಎಂದರು.
ಸಂವಾದದಲ್ಲಿ ಟ್ರಸ್ಟ್‌ನ ಎನ್.ಮಂಜುನಾಥ್, ಗೋಪಾಲ್ ಯಡಗೆರೆ, ನಾಗರಾಜ್ ನೇರಿಗೆ ಹಾಗೂ ಇತರರಿದ್ದರು.

ಮಾಜಿ ಸಚಿವ ಕಿಮ್ಮನೆಗೆ ಪಾಪಪ್ರಜ್ಞೆ

ನಂದಿನಿ ಪ್ರಕರಣದ ಕುರಿತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಈಗ ಸಿಬಿಐ ತನಿಖೆಗೆ ಒತ್ತಾಯಿಸಿರುವುದು ಅವರ ಪಾಪಪ್ರಜ್ಞೆಗೆ ಕಾರಣವೆಂದು ಹೇಳಿದ ಆರಗ ಜ್ಞಾನೇಂದ್ರ ಹಿಂದೆ ನಾನೇ ಸಿಬಿಐ ತನಿಖಗೆ ಒಪ್ಪಿಸಲು ಆಗ್ರಹಿಸಿದ್ದೆ. ಘಟನೆ ನಡೆದು ಬಹಳಷ್ಟು ವರ್ಷಗಳಾದವು. ಅಂದು ಸಿಒಡಿ ತನಿಖೆ ನಡೆಸಿದಂತೆ ಮಾಡಿ ೨೦೦ಕ್ಕೂ ಹೆಚ್ಚು ಜನರ ವಿರುದ್ದ ಪ್ರಕರಣ ಮುಗಿಸಿದ್ದರು. ಸಾಕ್ಷಿಗಳು ನಾಶವಾಗಿರುವ ಇಂತಹ ಹೊತ್ತಿನಲ್ಲಿ ಸಿಬಿಐ ತನಿಖೆ ನಡೆಸಿದರೆ ಯಾವ ಪ್ರಯೋಜನ. ಅವರ ಓಟ್ ಬ್ಯಾಂಕ್ ರಾಜಕಾರಣ ಈ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು ಎಂದರು.

Exit mobile version