Site icon TUNGATARANGA

ಮತ್ತೆ ಅಧ್ಯಕ್ಷಗಿರಿ ಹಿಡಿದ ಡಾ. ಆರ್. ಎಂ. ಮಂಜುನಾಥ ಗೌಡ

ಶಿವಮೊಗ್ಗ,ಜು.30:
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಗೆ ತಡೆಯಾಜ್ಣೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಡಾ. ಆರ್ ಎಂ ಮಂಜುನಾಥ್ ಗೌಡ ಅವರು ಮತ್ತೆ ಸಹಕಾರಿ ಇಲಾಖೆ ಮೂಲಕ ಆಟ ಆಡಿಸಿದ್ದವರಿಗೆ ಸರಿಯಾಗಿ ಕೊಕ್ ನೀಡಿದ್ದಾರೆ. ಮತ್ತೆ ಅದ್ಯಕ್ಷಗಿರಿ ಅಲಂಕರಿಸಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಲಿದೆ ಎಂದು ಘೋಷಣೆ ಹೊರಬೀಳುತ್ತಿದ್ದಂತೆ ಸುಮಾರು 10-30 ಕ್ಕೆ ಆರ್ ಎಂ ಮಂಜುನಾಥ್ ಗೌಡರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ತನ್ನ ಸ್ಥಾನವನ್ನ ವಜಾಗೊಳಿಸಿದ ಕ್ರಮವನ್ನ ಮತ್ತು ಚುನಾವಣೆ ನಡೆಸದಂತೆ ಪ್ರಶ್ನಿಸಿ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿದುಬಂದಿದೆ.
ಸಾಲ ನೀಡುವುದರಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕೆ ಸರ್ಕಾರ ಆರ್.ಎಂ .ಮಂಜುನಾಥ ಗೌಡರನ್ನ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಆದೇಶಿಸಿತ್ತು. ಉಪಾಧ್ಯಕ್ಷರಾಗಿದ್ದ ಚನ್ನವೀರಪ್ಪನವರನ್ನ ಅಧ್ಯಕ್ಷರಾಗಿ ಮುಂದುವರೆಯಲು ನಿರ್ದೇಶಿಸಿತ್ತು. ಇದಕ್ಕೂ ಮೊದಲು ಸಹಕಾರ ಇಲಾಖೆಯ ಡಿಆರ್ ನಾಗೇಶ್ ಡೋಂಗರೆ ಅವರನ್ನ ಎಂಡಿಯಾಗಿ ಅಧಿಕಾರ ಸ್ವೀಕರಿಸುವಂತೆ ಆದೇಶಿಸಿತ್ತು.
ಜು. 21 ರಂದು ಚುನಾವಣೆ ಅಧಿಕಾರಿಯಾಗಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿಯವರನ್ನ ನೇಮಿಸಿ ಸರ್ಕಾರ ನೇಮಿಸಿತ್ತು. ಇಂದು ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಬೇಕಿತ್ತು. ಆದರೆ 10-30 ರ ಸಮಯದಲ್ಲಿ ಡಾ. ಆರ್ ಎಂ ಮಂಜುನಾಥ್ ಗೌಡರ ತಡೆಯಾಜ್ಞೆ ಚುನಾವಣೆ ಅಧಿಕಾರಿಯ ಕೈ ಸೇರಿದ್ದು ಚುನಾವಣೆ ನಡೆಸದಂತೆ ಮದ್ಯಂತರ ತಡೆಯಾಜ್ಞೆ ನೀಡಲಾಗಿದೆ.
ಮಂಜುನಾಥ್ ಗೌಡರು ತನ್ನನ್ನ ಡಿಸಿಸಿ ಬ್ಯಾಂಕ್ ನ ಸದಸ್ಯತ್ವದಿಂದ ರದ್ದುಗೊಳಿಸಿರುವ ಮತ್ತು ಚುನಾವಣೆಗೆ ಮದ್ಯಾಂತರ ತಡೆಯಾಜ್ಞೆ ತಂದ ಕಾರಣ ಚುನಾವಣೆ ರದ್ದುಗೊಂಡಿರುವುದಲ್ಲದೆ ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್ ಎಂ ಎಂ ಮುಂದುವರೆಯಲಿದ್ದಾರೆ. ಡೊಂಗ್ರೆ ಸಹ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರೆದಿದ್ದಾರೆ.

Exit mobile version