Site icon TUNGATARANGA

ಜಿಲ್ಲೆಯಲ್ಲಿ ಬೆದರಿಕೆ ಹುಟ್ಟಿಸಿದ ಕೊರೊನಾ ಸೊಂಕು…! 635 ಜನರಲ್ಲಿ ಪಾಸೀಟೀವ್

ಶಿವಮೊಗ್ಗ, ಜ.21:
ಜನವರಿ 20ರ ರಾತ್ರಿ ಜಿಲ್ಲಾಡಳಿತದ ವರದಿಯಂತೆ 635 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅರ್ಧ ಸಾವಿರ ದಾಟಿದ ಕೊರೊನಾ ಮಹಾಮಾರಿ ಇಡೀ ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ.
ವರದಿಯಲ್ಲಿ ಸೋಂಕಿಗೆ ಒಬ್ಬರು ಬಲಿಯಾಗಿದ್ದು ಒಟ್ಟಾರೆ ಸಾವಿನ ಸಂಖ್ಯೆ 1075 ಕ್ಕೆ ಏರಿದೆ. ಅಂದರೆ ಮೂರನೇ ಅಲೆಯಲ್ಲಿದು ಮೂರನೇ ಸಾವು.
2727 ಜನರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು ಇದರಲ್ಲಿ 2598 ಜನರಲ್ಲಿ ನೆಗೆಟಿವ್ ಎಂದು ವರದಿಬಂದಿದೆ.


ವಿದ್ಯಾ ಕ್ಷೇತ್ರದ 520 ಮಕ್ಕಳು, ಶಿಕ್ಷಕರು ಹಾಗೂ ಇತರರ ಪರೀಕ್ಷೆಯಲ್ಲಿ 185 ಜನರಿಗೆ ಪಾಸಿಟೀವ್ ಬಂದಿದೆ.
ಇಂದು 295 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಕೇರ್ ಸೆಂಟರ್ ಗೆ 00 ಜನರನ್ನ ಇಂದು ಸೇರಿಸಲಾಗಿದ್ದು, 24 ಜನರನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 1933 ಜನರನ್ನ ಹೋಂ ಐಸೋಲೇಷನ್ ನಲ್ಲಿರಲು ಸೂಚಿಸಲಾಗಿದೆ.
ಒಟ್ಟು ಜಿಲ್ಲೆಯಲ್ಲಿ 2028 ಜನರಲ್ಲಿ ಕೊರೋನ ಪಾಸಿಟಿವ್ ಆಕ್ಟಿವ್ ಕೇಸ್ ಗಳಿವೆ. ಶಿಕ್ಷಣ ಸಂಸ್ಥೆಗಳಲ್ಲಿರುವ ಇಂದು 520 ಶಿಕ್ಷಣ ಸಂಸ್ಥೆಗಳವರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ 185 ಜನರಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ಬುಲಿಟಿನ್ ತಿಳಿಸಿವೆ.
ತಾಲೂಕವಾರು ಹೀಗಿದೆ
ಶಿವಮೊಗ್ಗ ತಾಲೂಕಿನಲ್ಲಿ 260, ಭದ್ರಾವತಿ 125, ತೀರ್ಥಹಳ್ಳಿಯಲ್ಲಿ 42, ಶಿಕಾರಿಪುರದಲ್ಲಿ 24, ಸಾಗರದಲ್ಲಿ 111, ಹೊಸನಗರದಲ್ಲಿ 28, ಸೊರಬದಲ್ಲಿ 29, ಹೊರ ಜಿಲ್ಲೆಯಲ್ಲಿ 16 ರಲ್ಲಿ ಪಾಸಿಟಿವ್ ಕಂಡುಬಂದಿದೆ.

Exit mobile version