ಶಿವಮೊಗ್ಗ,ಜ.20:
ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಬಳಿಯ ಅರಹತೊಳಲು ಕೈಮರದ ವ್ಯಕ್ತಿಯೋರ್ವ ಇಂದು ರಾತ್ರಿ (20-01-22) ಒಂಬತ್ತು ಮುವತ್ತರ ವೇಳೆಯಲ್ಲಿ ಶಿವಮೊಗ್ಗ ಬಿಹೆಚ್ ರಸ್ತೆಯ ಹಳೆಯ ತುಂಗಾ ಸೇತುವೆ ಮೇಲಿಂದ ಹಾರಿದ್ದಾನೆ.
ಆ ಸಮಯದಲ್ಲಿ ಸಮೀಪದಲ್ಲಿ ನಿಂತಿದ್ದ, ಕರ್ತವ್ಯದ ಅವಧಿ ಅಲ್ಲದಿದ್ದರೂ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ಶ್ರೀನಿವಾಸ್ ಅವರು ಅಲ್ಲಿಗೆ ಬಂದು ನೋಡಿದ್ದಾರೆ.
ಕೆಳಗೆ ಬಿದ್ದ ವ್ಯಕ್ತಿಯನ್ನು ಮಂಜುನಾಥ್ ಗೌಂಡರ್ ಎಂದು ಹೇಳಲಾಗಿದ್ದು, ಆತ ನೀರಿನಲ್ಲಿ ಬಿದ್ದಿದ್ದಾನೆ. ಆಳದ ನೀರಿದ್ದು ಮುಳುಗುವ ಹಂತದಲ್ಲಿದ್ದ ಮಂಜುನಾಥನನ್ನು ಉಳಿಸಲು ಅಲ್ಲಿಯೇ ಇದ್ದ ಆಟೋ ಚಾಲಕರಾದ ಅರ್ಜುನ್ ಹಾಗೂ ಕಾಂತ ಎಂಬುವವರನ್ನು ಕರೆದುಕೊಂಡು ಅವರಿಬ್ಬರ ಸಹಾಯದಿಂದ ಮಂಜುನಾಥನನ್ನು ಉಳಿಸಿದ್ದಾರೆ.
ಮೇಲಿಂದ ಬಿದ್ದ ರಬಸಕ್ಜೆ ಕಲ್ಲಿನ ಏಟು ಬಿದ್ದು ಮಂಜುನಾಥನ ಸೊಂಟ ಮುರಿದಿದೆ ಎನ್ನಲಾಗಿದೆ.
ಆ ಕ್ಷಣದಲ್ಲಿ ಕರೆ ಮಾಡಿದ ಅಂಬ್ಯುಲೆನ್ಸ್ ಬರದ ಕಾರಣ ಅರ್ಜುನ್ ಅವರ ಆಟೋದಲ್ಲೇ ಮಂಜುನಾಥನನ್ನ ಮೆಗಾನ್ ಗೆ ಕಳುಹಿಸಲಾಗಿದೆ.
ಈ ಮಂಜುನಾಥ ಅದ್ಯಾವುದೋ ಸೈಟ್ ಅನ್ಯಾಯ ಕುರಿತು ತಡಬಡಿಸುತ್ತಿದ್ದ. ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ಕರ್ತವ್ಯದ ಅವಧಿ ಅಲ್ಲದಿದ್ದರೂ ಸಹ ಓರ್ವ ಪೊಲೀಸ್ ಉದ್ಯೋಗಿಯಾಗಿ ಆ ಕ್ಷಣದಲ್ಲಿ ಸ್ಪಂದಿಸಿದ ಎಎಸ್ ಐ ಶ್ರೀನಿವಾಸ್ ಹಾಗೂ ಆಟೋ ಚಾಲಕರಾದ ಅರ್ಜುನ್ , ಕಾಂತ ಅವರ ಕರ್ತವ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.