Site icon TUNGATARANGA

ಮೂರನೇ ಅಲೆಯ ಎರಡನೇ ಸಾವು…! ವೃದ್ದ ಮಹಿಳೆಯದು ಅವತ್ತೆ ಅಂತ್ಯ ಸಂಸ್ಕಾರವಾಗಿತ್ತಲ್ವೇ.? ಇಂದು ಕೊರೊನಾ 422, ಭದ್ರಾವತಿಯಲ್ಲಿ ಹೆಚ್ಚು….!

ಶಿವಮೊಗ್ಗ, ಜ.19:
ಶಿವಮೊಗ್ಗ ಜಿಲ್ಲೆಯ ಅದರಲ್ಲೂ ಶಿವಮೊಗ್ಗ ನಗರದ ಕೊರೊನಾ ಹೆಚ್ಚುವ, ಹೆಚ್ಚುತ್ತಿರುವ, ಆಗುತ್ತಿರುವ ಅನಾಹುತಕಾರಿ ಅಂಶಗಳ ಬಗ್ಗೆ ನಿರಂತರ ಸುದ್ದಿ ಮೂಲಕ ಆರೋಗ್ಯ ಇಲಾಖೆಯನ್ನು ಎಚ್ಚರಿಸುತ್ತಿದ್ದ ತುಂಗಾತರಂಗ ಸುದ್ದಿ ಲೋಕಕ್ಕೆ ಇಂದೂ ಸಹ ಮತ್ತೊಂದು ಮುಖ್ಯ ವರದಿ ಸಿಕ್ಕಿದೆ. ಅದು ಅಲ್ಲಿನ ಜನ ಹೇಳಿದ್ದು..!


ಮೊನ್ನೆ ಸಾವು ಕಂಡ ವೃದ್ದರ ವಿಷಯ ಮೊದಲ ಬಾರೀ ಎಂಬಂತೆ ಕೊರೊನಾ ಮೂರನೇ ಅಲೆಯಲ್ಲಿ ವೃದ್ದರೊಬ್ಬರು ಸಾವು ಕಂಡಿದ್ದರು. ಅವತ್ತೇ ಅದೇ ಬೆಡ್ ನಿಂದ ಎರಡು ಬೆಡ್ ಪಕ್ಕದ ಮಹಿಳೆ ಸಾವು ಕಂಡಿದ್ದರು. ಈ ಸತ್ಯ ಆ ಸ್ಥಳದಲ್ಲಿದ್ದ ವೃದ್ದರ ಸಂಬಂಧಿ ಹಾಗೂ ಕಾಂಗ್ರೆಸ್ ಮುಖಂಡರೊಬ್ಬರ ಹೇಳಿಕೆ. ಅಗತ್ಯ ಬಿದ್ದರೆ, ಈ ಮಾಹಿತಿ ಡಿಹೆಚ್ ಓರವರಿಗೆ ನೀಡಲು ಪತ್ರಿಕೆ ಸಿದ್ದ.


ಪತ್ರಿಕೆ ಮೂಲಗಳಿಗೆ ದೊರೆತ ಮಾಹಿತಿಯಂತೆ ಮೂರು ದಿನದ ಹಿಂದಿನ ಸಂಜೆ ಸಾವು ಕಂಡಿದ್ದ ವ್ಯಕ್ತಿ ನಿನ್ನೆಯ ಬುಲೆಟಿನ್ ಬಂದಿತ್ತು. ಅವತ್ತೇ ಸಾವುಕಂಡಿದ್ದ, ಒಂದೇ ಬಾರೀ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದ ಮಹಿಳೆ ಸಾವು ಇಂದೇಕೆ ಬಂದದ್ದು ಎಂದು ಪ್ರಶ್ನಿಸುತ್ತಿದ್ದಾರೆ. ಆರೋಗ್ಯಾಧಿಕಾರಿಗಳೇ ಮಾಹಿ ನೀಡಬೇಕು.
ಸತ್ಯ ಹಾಗೂ ಸ್ಪಷ್ಟವಾದ ಜಿಲ್ಲಾ ಆಡಳಿತ ವ್ಯವಸ್ಥೆ ನೀಡುವ ವರದಿಗೆ ಮಾದ್ಯಮ ರಂಗ ಗೌರವಿಸುತ್ತೆ. ಆದರೆ, ಸರಿಯಾಗಿ ನಡೆಯದ ಚೆಕಪ್, ಪರಿಶೀಲನೆ ಅಂದರೆ ಓಂ ಶಕ್ತಿ ವಿಚಾರವನ್ನು ನಗಣ್ಯ ಮಾಡಿದ್ದೇ ಶಿವಮೊಗ್ಗ ನಗರದ ಕೊರೊನಾ ಮಹಾಮಾರಿಗೆ ಕಾರಣ ಎನ್ನಲಾಗಿದೆ. ಓಂ ಶಕ್ತಿ ಪ್ರವಾಸ ಹೋಗಿದ್ದವರಲ್ಲಿ 90 ಜನರಿಗೆ ಕೊರೊನಾ ಬಂದಿದೆ ಎನ್ನುವ ಆರೋಗ್ಯ ಇಲಾಖೆ ಅವರ ಮೂಲಕ ಬಂದಿವವರ ಲೀಸ್ಟ್ ಕೊಡಲಿ.


ಈ ಪೀಠಿಕೆಗೆ ಕಾರಣ ಆರೋಗ್ಯ ಇಲಾಖೆ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆಯಾದರೂ ಅಲ್ಲಿ ಬರುವ ಒತ್ತಡ ಜಿಲ್ಲೆಯನ್ನು ಅದರಲ್ಲೂ ನಗರವನ್ನು ಈಗ ಭದ್ರಾವತಿಯನ್ನೂ ಹಾಳು ಮಾಡಿದೆ.
ಶಿವಮೊಗ್ಗ ಜಿಲ್ಲೆಯ ಇಂದಿನ ಕೊರೊನಾ ಮಾಹಿತಿಯ ಚಿತ್ರ ಪಟ ನಿಮ್ಮ ಮುಂದಿದೆ. ಅದನ್ನ ಗಮನಿಸಿ……ಇಂದೊಂದು ಮೂರನೇ ಅಲೆಯ ಎರಡನೆಯ ಸಾವು ಕಂಡಿದೆ. ಮಿಕ್ಕ ಮಾಹಿತಿ ನಿರೀಕ್ಷೆಯಷ್ಟೆ

Exit mobile version