ಶಿವಮೊಗ್ಗ:
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ತಾಲೂಕುಗಳ ಶಾಲಾ ಕಾಲೇಜುಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ 3 ದಿನ ಶಾಲೆಗಳಿಗೆ ರಜೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ರಿಂದ 9 ನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡಲಾಗುತ್ತದೆ. ಉಳಿದ 10 ನೇತರಗತಿ ಹಾಗೂ ಪಿಯು ಕಾಲೇಜ್ ಗಳಿಗೆ ಆ ನಂತರ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಶಾಲೆಯ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ವಿಚಾರದ ಬಗ್ಗೆ ವರದಿ ಆಧರಿಸಿ, ಶಾಲೆಗಳ ರಜೆ ಬಗ್ಗೆ ತೀರ್ಮಾನಿಸಲಾಗುವುದು. ಅನೇಕ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರು ನನಗೆ ಈಗಾಗಲೇ ಕರೆ ಮಾಡುತ್ತಿದ್ದಾರೆ. ಶಾಲೆಗಳು ರಜೆ ಕೊಡಿಸಲು ಅನೇಕರು ಕರೆ ಮಾಡುತ್ತಿದ್ದಾರೆ. ಇದು ಒಬ್ಬರು ಮಾಡುವ ತೀರ್ಮಾನವಲ್ಲ. ಈಗಾಗಲೇ, ಈ ಸಂಬಂಧ ವರದಿ ತರಲು, ಜಿಲ್ಲಾಧಿಕಾರಿಗಳಿಗೆ, ಡಿ.ಹೆಚ್.ಓ. ಹಾಗೂ ಡಿಡಿಪಿಐ ಗೆ ಸೂಚಿಸಿದ್ದೇನೆ. ವರದಿ ನೋಡಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.