ಇಂದು ಎಂದಿನಂತಹ ಮಾಹಿತಿ, ಆರೋಗ್ಯ ಇಲಾಖೆ, ಮೆಗಾನ್ ಆಸ್ಪತ್ರೆ ಜವಾಬ್ದಾರಿ ಗಳಿಗೆ ಒತ್ತಡ ಬಾರದಿರಲಿ
ಶಿವಮೊಗ್ಗ, ಜ.19:
ಶಿವಮೊಗ್ಗ ಜಿಲ್ಲೆಯ ಅದರಲ್ಲೂ ಶಿವಮೊಗ್ಗ ನಗರದ ಕೊರೊನಾ ಹೆಚ್ಚುವ, ಹೆಚ್ಚುತ್ತಿರುವ, ಆಗುತ್ತಿರುವ ಅನಾಹುತಕಾರಿ ಅಂಶಗಳ ಬಗ್ಗೆ ನಿರಂತರ ಸುದ್ದಿ ಮೂಲಕ ಆರೋಗ್ಯ ಇಲಾಖೆಯನ್ನು ಎಚ್ಚರಿಸುತ್ತಿದ್ದ ತುಂಗಾತರಂಗ ಸುದ್ದಿ ಲೋಕಕ್ಕೆ ಮತ್ತೊಂದು ಮುಖ್ಯ ವರದಿ ಸಿಕ್ಕಿದೆ.
ಇದೇ ಮೊದಲ ಬಾರೀ ಎಂಬಂತೆ ಕೊರೊನಾ ಮೂರನೇ ಅಲೆಯಲ್ಲಿ ವೃದ್ದರೊಬ್ಬರು ಸಾವು ಕಂಡಿದ್ದಾರೆ. ಅದೂ ಪತ್ರಿಕೆ ಮೂಲಗಳಿಗೆ ದೊರೆತ ಮಾಹಿತಿಯಂತೆ ಮೊನ್ನೆ ಸಂಜೆ ಸಾವು ಕಂಡಿದ್ದ ವ್ಯಕ್ತಿ ನಿನ್ನೆಯ ಬುಲೆಟಿನ್ ನಲ್ಲಾದರೂ ಬರಬೇಕಿತ್ತು.
ಸತ್ಯ ಹಾಗೂ ಸ್ಪಷ್ಟ ವರದಿಗೆ ಜಿಲ್ಲಾ ಆಡಳಿತ ವ್ಯವಸ್ಥೆ ನೀಡುವ ವರದಿಗೆ ಮಾದ್ಯಮ ರಂಗ ಗೌರವಿಸುತ್ತೆ. ಆದರೆ, ಸರಿಯಾಗಿ ನಡೆಯದ ಚೆಕಪ್, ಪರಿಶೀಲನೆ ಅಂದರೆ ಓಂ ಶಕ್ತಿ ವಿಚಾರವನ್ನು ನಗಣ್ಯ ಮಾಡಿದ್ದೇ ಶಿವಮೊಗ್ಗ ನಗರದ ಕೊರೊನಾ ಮಹಾಮಾರಿಗೆ ಕಾರಣ ಎನ್ನಲಾಗಿದೆ. ಓಂ ಶಕ್ತಿ ಪ್ರವಾಸ ಹೋಗಿದ್ದವರಲ್ಲಿ 85 ಜನರಿಗೆ ಕೊರೊನಾ ಬಂದಿದೆ ಎನ್ನುವ ಆರೋಗ್ಯ ಇಲಾಖೆ ಅವರ ಮೂಲಕ ಬಂದಿವವರ ಲೀಸ್ಟ್ ಕೊಡಲಿ.
ಈ ಪೀಠಿಕೆಗೆ ಕಾರಣ ಆರೋಗ್ಯ ಇಲಾಖೆ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆಯಾದರೂ ಅಲ್ಲಿ ಬರುವ ಒತ್ತಡ ಜಿಲ್ಲೆಯನ್ನು ಅದರಲ್ಲೂ ನಗರವನ್ನು ಹಾಳು ಮಾಡಿದೆ.
ಶಿವಮೊಗ್ಗ ಜಿಲ್ಲೆಯ ಇಂದಿನ ಕೊರೊನಾ ಮಾಹಿತಿಯ ಚಿತ್ರ ಪಟ ನಿಮ್ಮ ಮುಂದಿದೆ. ಅದನ್ನ ಗಮನಿಸಿ……ಇಂದೊಂದು ಮೂರನೇ ಅಲೆಯ ಮೊದಲ ಸಾವು ಕಂಡಿದೆ. ಮಿಕ್ಕ ಮಾಹಿತಿ ನಿರೀಕ್ಷೆಯಷ್ಟೆ