Site icon TUNGATARANGA

ಶಿವಮೊಗ್ಗ ಕೊರೊನಾ ಸೊಂಕಿತರ ಸಾವು ಹೆಚ್ಚಳ! ವಾರದಲ್ಲಿ 17 ಮಂದಿ ನಿಧನ

ಶಿವಮೊಗ್ಗ, ಜು.29:
ಶಿವಮೊಗ್ಗಕ್ಕೆ ಅದು ಯಾವ ಕರ್ಮ ತಗುಲಿದೆಯೋ ಗೊತ್ತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಜುಲೈ 20ರಿಂದ ಜುಲೈ 28ರ ನಿನ್ನೆಯವರೆಗೆ ಸಂಭವಿಸಿದ ಸಾವಿನ ಸಂಖ್ಯೆಗಳನ್ನು ಅವಲೋಕಿಸಿದಾಗ ನಿಜಕ್ಕೂ ಗಾಬರಿ ಆತಂಕ ಸೃಷ್ಟಿಯಾಗುತ್ತಿದೆ.
ಶಿವಮೊಗ್ಗ ಕೊರೊನಾ ಆಸ್ಪತ್ರೆಯಲ್ಲಿ ಸಾವು ಕಂಡವರ ಸಂಖ್ಯೆಗಳನ್ನು ಗಮನಿಸಿದಾಗ ಆತಂಕ ಒಂದೆಡೆ ಮನೆಮಾತಾಗಿದ್ದರೆ, ಕಳೆದ ವಾರದಲ್ಲಿ ಸಾವು ನಿತ್ಯ ಹೆಚ್ಚಾಗುತ್ತಿರುವುದು ಆತಂಕವನ್ನು ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಜುಲೈ 20ರಂದು 02, 21 ರಂದು 4, 22ರಂದು 3, 24ರಂದು 2, 25 ರಂದು 2, 26 ರಂದು 2, 27ರಂದು 1 ಹಾಗೂ ನಿನ್ನೆಯ ಜುಲೈ 28ರಂದು ಮೂರು ಪ್ರಕರಣಗಳು ಕಂಡುಬಂದಿವೆ.
ಸಾವಿನ ಸಂಖ್ಯೆ ಕಳೆದ ಹತ್ತು ದಿನಗಳಲ್ಲಿ 21 ಮುಟ್ಟಿರುವುದು ಬಹಳಷ್ಟು ಆತಂಕವನ್ನು ತಂದೊಡ್ಡಿದೆ. ಕಳೆದ ಜುಲೈ ಇಪ್ಪತ್ತರ ಸೋಮವಾರದಿಂದ ಜುಲೈ 28 ರ ಸೋಮವಾರದವರೆಗೆ ಒಂದು ವಾರದ ಅವಧಿಯಲ್ಲಿ ಸಾವು ಕಂಡ ಸೋಂಕಿತರ ಸಂಖ್ಯೆ 17 ಆಗಿರುವುದು ಸಾವಿನ ಪ್ರಮಾಣದ ಹೆಚ್ಚಳದ ಬಗ್ಗೆ ಆತಂಕವನ್ನು ಉಂಟಾಗುವಂತೆ ಮಾಡಿದೆ.

Exit mobile version