Site icon TUNGATARANGA

ಕೊರೊನಾ, ಲಾಕ್‌ಡೌನ್ ನಡುವೆ ನಮ್ ಶಿವಮೊಗ್ಗ ಜಿಲ್ಲೆ ಸಂಕ್ರಾಂತಿ ಹೇಗಿತ್ತು ಗೊತ್ತಾ… ಇಡೀ ಶಿವಮೊಗ್ಗ ಚಿತ್ರ ಮಾಹಿತಿ ನೋಡಿ….

ಶಿವಮೊಗ್ಗ,ಜ.15:
ಶಿವಮೊಗ್ಗ ಜಿಲ್ಲೆಯಲ್ಲಿಂದು ವಾರಾಂತ್ಯ ಕರ್ಪ್ಯೂ, ಮೊನ್ನೆಯಿಂದ ಮನೆಯವರು ಸಿದ್ದತೆಮಾಡಿಕೊಂಡಿದ್ದ ಸಂಕ್ರಾಂತಿ ಹಬ್ಬದ ಸಡಗರವಿತ್ತು. ಎಲ್ಲಾ ಎಂದಿನಂತಿತ್ತು.
ಜನರ ಅಗತ್ಯತೆ ಸಿಗಲಿಲ್ಲ. ಜನ ಅದರಲ್ಲೇ ನೆಮ್ಮದಿ ಹುಡುಕಿದರು, ನಡುವೆ ನೊಂದ ಸಾಕಷ್ಟು ಜನ ಇರೋಬರೋ ಎಲ್ಲವನ್ನು ಕೊಟ್ಟು ತಮ್ಮ ಅಗತ್ಯ ಮುಗಿಸಿಕೊಂಡರು …ಹೀಗೆ ಎನ್ನಲು ಕಾಣ ಅಷ್ಟೇ….,


ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ವಿರುದ್ದ ಜನ ಸಿಡಿದೆದ್ದಿರುವುದಂತೂ ಸತ್ಯ.
ಬೀಡಾ ಅಂಗಡಿ, ಹೋಟೆಲ್ ತೆರೆದಿವೆ. ಪೊಲೀಸರು ಬಂದರೆ ಬಾಗಿಲು ಹಾಕಬೇಕು. ಜನರಿಲ್ಲ ಜಾಸ್ತಿ ಮಾತಾಡುವಂತಿಲ್ಲ. ಪಾಪ ಅವರಾರಿಗೆ ಮಾರಬೇಕು..?


ಉಳಿದಂತೆ ಎಲ್ಲಾ ಅಂದರೆ ಬಟ್ಟೆ, ಕರೆಂಟು, ಯುಜಿಡಿ, ಸಿಮೆಂಟು, ಕಬ್ಬಿಣದಂಗಡಿಗಳು ತೆರೆದಿದ್ದರೂ ತಮ್ಮ ಗಿರಾಕಿಯಾದವವರು ಅಂದರೆ ಬೇಕಿದ್ದವರಿಗೆ ನೀಡುತ್ತಿದ್ದಾರೆ.


ಶಿವಮೊಗ್ಗ ನಗರದಲ್ಲಿ ಕಾಲಿಟ್ಟಿರುವ ಗ್ರೇಟ್ 5 ಸ್ಟಾರ್ ಹೋಟೆಲ್ ನ್ಲಿ ಅಂದರೆ ದುಡ್ಡಿದ್ದವರ ವ್ಯವಹಾರ ಬೇರೆ ಇದೆ.
ಹಬ್ಬ ಮಾಡು ಅಥವಾ ಬೇಡ ಎಂದಿದ್ದ ಸರ್ಕಾರ ಅದರಲ್ಲೂ ನಮ್ ಶಿವಮೊಗ್ಗದ ಕೆಲ ಜನಪ್ರತಿನಿಧಿಗಳು, ತಮ್ಮ ಹಬ್ಬವನ್ನು ಎಂಬ ಮಹಿಮೆಯನ್ನು ಬೇರೆ ಕಡೆ ಇಟ್ಕೊಂಡಿದ್ದಾರೆ.


ಸಂಕ್ರಾಂತಿ ಹಬ್ಬದ ಆಚರಣೆಗೆ ಕಳೆದರಡು ದಿನದಿಂದ ಜನ ಭರದ ಸಿದ್ಧತೆ ನಡೆದಿದ್ದು, ಜನರು ವಿವಿಧ ಸಾಮಗ್ರಿಗಳ ಖರೀದಿಗೆ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದರು.
ನಿನ್ನೆ‌ಮಾರುಕಟ್ಟೆಗಳು ಹಾಗೂ ಮಳಿಗೆ ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಕಂಡುಬಂದರು. ಗಾಂಧಿಬಜಾರ್ ಗ್ರಾಹಕರಿಂದ ಗಿಜಿಗುಡುತ್ತಿತ್ತು. ಹೊಸ ಬಟ್ಟೆ ಖರೀದಿ, ದಿನಸಿ ಖರೀದಿಗೆ ಜನ ಬಂದಿದ್ದು ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.


ನಗರದ ಹಲವೆಡೆ ಟನ್‌ಗಟ್ಟಲೆ ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇಡಲಾಗಿದೆ. ರಸ್ತೆಗಳಲ್ಲಿ ಮತ್ತು ತಳ್ಳು ಗಾಡಿಗಳಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿತ್ತು. ಬಿಳಿ ಕಬ್ಬು ಒಂದು ಜಲ್ಲೆಯ ಸಗಟು ದರ ೫೦ ಹಾಗೂ ಕಪ್ಪು ಬಣ್ಣ ಕಬ್ಬು ೭೦ ರವರೆಗೆ ಮಾರಾಟವಾಗುತ್ತಿತ್ತು. ಚಿಲ್ಲರೆ ವ್ಯಾಪಾರಿಗಳು ಜಲ್ಲೆಗಳನ್ನು ತುಂಡರಿಸಿ, ಒಂದನ್ನು ೧೦ ಮತ್ತು ೨೦ಕ್ಕೆ ಮಾರಾಟ ಮಾಡುತ್ತಿದ್ದಾರೆ.
’ಎಳ್ಳು-ಬೆಲ್ಲ’ ತಯಾರಿಸಲು ಬೆಲ್ಲ, ಎಳ್ಳು, ಬಣ್ಣದ ಬತ್ತಾಸು, ಕೊಬ್ಬರಿ ಖರೀದಿಯಿಂದಾಗಿ ದಿನಸಿ ಮಾರಾಟ ಅಂಗಡಿಗಳಲ್ಲೂ ಜನರು ಹೆಚ್ಚಿತ್ತು..

Exit mobile version