Site icon TUNGATARANGA

ಶಿವಮೊಗ್ಗದಲ್ಲಿ ತಮಿಳುನಾಡಿನಂತೆ ಸಂಕ್ರಾತಿ ಹಬ್ಬದ ವಿಶೇಷ ಪೊಂಗಲ್ ಸಂಭ್ರಮ….!

ಸಂಕ್ರಾಂತಿ ಸಂಭ್ರಮದಲ್ಲಿ ನಡೆಸುವ ಪೊಂಗಲ್ ಆಚರಣೆ ಶಿವಮೊಗ್ಗದಲ್ಲಿ ಅತ್ಯಂತ ವಿಶೇಷ. ಇಲ್ಲಿ ಸೂರ್ಯದೇವನನ್ನು ಪೂಜಿಸುವ ಅದಕೆ ಮಣ್ಣನ ಮಡಿಕೆಯಲ್ಲಿ ಅಕ್ಕಿ, ಬೆಲ್ಲ, ಹೆಸರು, ಗೋಡಂಬಿ, ದ್ರಾಕ್ಷಿ, ಹಾಲು, ತುಪ್ಪ ಸೇರಿದಂತೆ ವಿವಿಧ ವಸ್ತುಗಳ ಮಿಶ್ರಣದ ಪೊಂಗಲ್ ತಯಾರಿಸು ಜೊತೆ ಸೂರ್ಯದೇವನಿಗೆ ನೈವೇದ್ಯ ಹಾಕುವ ಪೂಜಿಸುವ ಈ ವಿಧಾನ ಈಗಲೂ ಶಿವಮೊಗ್ಗ ದಲ್ಲಿ ವಿಶೇಷ.
ಶಿವಮೊಗ್ಗ ಕಾಶಿಪುರದಲ್ಲಿ ಎಂ.ಆರ್.ಎಂ ಕುಟುಂಬದ ಎಸ್. ರಮೇಶ್, ಆದರ್ಶ ಕಾಲೋನಿಯ ಮಾನವ ಹಕ್ಕು ಕಮಿಟಿ ನಾಗರಾಜ್, ಅವರ ಮನೆಯ ಸಂಭ್ರಮದ ಚಿತ್ರಣಗಳು ಇಲ್ಲಿವೆ.
ಮಾನವ ಹಕ್ಕುಗಳ ಕಮಿಟಿ ಜಿಲ್ಲಾಧ್ಯಕ್ಷರಾದ ಎಸ್..ರಮೇಶ್, ಪ್ರಮುಖರಾದ ಜಿ. ಪದ್ಮನಾಭ್, ಗಜೇಂದ್ರ ಸ್ವಾಮಿ ಹಾಗೂ ಇತರರು ಶುಭಕೋರಿದ್ದಾರೆ.
ಹಾಗೆಯೇ ಇಂದು ಎಳ್ಳು ಬೆಲ್ಲ ಬೀರಲಾಯಿತು. ಸೂರ್ಯನ ಪಥಸಂಚಲನದ ಈಗ ಹಿರಿಯರ ಹಬ್ಬ ಸಂಭ್ರಮ. ಇಲ್ಲಿ ಹಿರಿಯರಿಗೆ ಎಡೆ ಇಡುತ್ತಾರೆ. ಮನೆಯ ಮೃತರಿಗೆ ಹೊಸಬಟ್ಟೆ ಇಡಲಾಗಿದೆ. ಗೋಪೂಜೆ ಮಾಡಲಾಗುತ್ತದೆ. ತಮಿಳುನಾಡಿನಲ್ಲಿನ ವೈಭವವನ್ನು ಶಿವಮೊಗ್ಗದಲ್ಲೂ ಕಾಣಬಹುದು.

Exit mobile version