Site icon TUNGATARANGA

ಶಿವಮೊಗ್ಗ/ಅಡಿಕೆ ಕೇ(ಚೇ)ಣಿ ವ್ಯವಹಾರದಲ್ಲಿ ನಷ್ಟವೇ ಈ ದಂಪತಿಗಳ ಆತ್ಯಹತ್ಯೆಗೆ ಕಾರಣವಾಯ್ತಾ…?

Davanagere Crime

ತೀರ್ಥಹಳ್ಳಿ :
ಅಡಿಕೆ ಕೇ(ಚೇ)ಣಿ ಅಂದರೆ ಗುತ್ತಿಗೆ ಹಿಡಿದು ಬದುಕು ಸಾಗಿಸುತ್ತಿದ್ದ ಕುಟುಂಬದ ದುರಂತದ ಘಟನೆಯಿದು.

ಶಿವಮೊಗ್ಗ/ ಗ್ರೇಟ್ ಬಾಲಕ, ಮೇಷ್ಟ್ರು ಕಳೆದುಕೊಂಡಿದ್ದ ಉಂಗ್ರ ಕೊಟ್ಟ…! ಈ ಬಾಲಕನಿಗೊಂದು ಸೆಲ್ಯೂಟ್ ಹೊಡಿಯಲು ಸುದ್ದಿ ಓದಿ https://tungataranga.com/?p=7892


ಈ ಕೇಣಿ ಅಥವಾ ಚೇಣಿಗಾಗಿ ಸಾಕಷ್ಟು ಸಾಲ ಮಾಡಿ ಅದರಲ್ಲಿ ನಷ್ಟ ಅನುಭವಿಸಿ ಮನನೊಂದ ದಂಪತಿಗಳಿಬ್ಬರೂ ನೇಣಿಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿನಡೆದಿದೆ.
ತೀರ್ಥಹಳ್ಳಿ ತಾಲ್ಲೂಕು ಸಂತೆಹಕ್ಲು ಸಮೀಪದ ಪೂರಲುಕೊಪ್ಪದ ಮಂಜುನಾಥ್  46 ) ಉಷಾ ( 43) ನೇಣಿಗೆ ಶರಣಾದ ದಂಪತಿ. ಇವರಿಗೆ 18 ಮತ್ತು 16 ವರ್ಷದ ಎರಡು ಗಂಡು ಮಕ್ಕಳು ಇದ್ದಾರೆ.


ಸುಮಾರು 2 ಎಕರೆ ಜಮೀನು ಹೊಂದಿದ್ದ ಇವರು  ಸಣ್ಣ ಕೃಷಿಕರಾಗಿದ್ದಾರೆ, ಕೃಷಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಕಡೆ ಸಾಲ ಮಾಡಿದ್ದು ಕರೋನಾ ಹಿನ್ನೆಲೆಯಲ್ಲಿ ಅವರಿಗೆ ಅದನ್ನು ನಿರ್ವಹಣೆ ಮಾಡಲು ಕಷ್ಟವಾಗಿತ್ತು.
ಇದರಿಂದ ಮನನೊಂದ ದಂಪತಿಗಳಿಬ್ಬರು ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶಿವಮೊಗ್ಗ | ಪಡಿತರ ಅಕ್ಕಿ ಪಾಲೀಶ್ ಮಾಡಿ ಮಾರುತ್ತಿದ್ದ ಬೃಹತ್ ಜಾಲ ಗ್ರಾಮಾಂತರ ಪೊಲೀಸರ ಬಲೆಗೆ.., https://tungataranga.com/?p=7870

Exit mobile version