Site icon TUNGATARANGA

ಶಿವಮೊಗ್ಗ/ ಗ್ರೇಟ್ ಬಾಲಕ, ಮೇಷ್ಟ್ರು ಕಳೆದುಕೊಂಡಿದ್ದ ಉಂಗ್ರ ಕೊಟ್ಟ…! ಈ ಬಾಲಕನಿಗೊಂದು ಸೆಲ್ಯೂಟ್ ಹೊಡಿಯಲು ಸುದ್ದಿ ಓದಿ

ಶಿವಮೊಗ್ಗ, ಜ.13:
ನನಗೊಂದು ಬಂಗಾರದಂತಹ ವಸ್ತು‌ಸಿಕ್ಕಿದೆ ಅಂದ್ರೆ ಯಾರ್ ತಾನೇ ಹಲಗೆ ಹೊಡಿತಾರೇ.? ಸಿಕ್ಕದ್ದನ್ನ ಬಳಸಿಕೊಂಡು ನಾನೇನು ಕದ್ದಿಲ್ಲ. ತಲೆ ಒಡೆದು ತಿಂದಿಲ್ಲ ಅಂತಾರೆ ಅನ್ನೊದು ಇಂದಿನ ಸತ್ಯ.
ಅಪರೂಪಕ್ಕೆಂಬತೆ ತನಗೆ ಸಿಕ್ಕ ವಸ್ತು ಮರಳಿಸುವ, ಸಂಬಂಧಿಸಿದವರಿಗೆ ತಲುಪಿಸುವ ಕಾರ್ಯ ಮಾಡ್ತಾರೆ. ಅದು ಮಾಮೂಲಿ ವಿಚಾರವಾಗುತ್ತಷ್ಟೇ…!
ಆದರೆ ಇಲ್ಲೊಬ್ಬ ಒಂಬತ್ತನೇ ತರಗತಿ ವಿದ್ಯಾರ್ಥಿ ತನಗೆ ಸಿಕ್ಕಿದ್ದ ಬಾರೀ ಬೆಲೆಬಾಳುವ ಬಂಗಾರದ ಉಂಗುರವನ್ನು ಸದ್ದು ಮಾಡದೇ, ತಾನು ನಂಬಿದ ತನ್ನ ಶಾಲೆಯ ಶಿಕ್ಷಕರಿಗೆ ನೀಡಿದ್ದಾನೆ ಅದೂ ಕಳೆದುಕೊಂಡಿದ್ದ ಶಾಲೆಯ ಮುಖ್ಯೋಪಾಧ್ಯಾಯರಿಗೇ…!


ಪರಿಸ್ಥಿತಿ ಹೇಗಾಗಿರಬಹುದು. ಕಳೆದುಕೊಂಡಿದ್ದ ಬಂಗಾರದ ಉಂಗುರ ನೀಡಿದ ವಿದ್ಯಾರ್ಥಿಯ ಪ್ರಾಮಾಣಿಕತೆ ಮೆರೆದ ಘಟನೆಗೆ ಶಾಲಾ ವ್ಯವಸ್ಥೆ, ಶಿಕ್ಷಕರು ಗೌರವಿಸಿದ್ದಾರೆ. ಇದು ಶಿವಮೊಗ್ಗ ನಗರದಲ್ಲಿ ನಡೆದಿದೆ.


ಶಿವಮೊಗ್ಗದ ಬಾಪೂಜಿ ನಗರದ ತುಂಗಾ ಪ್ರೌಢಶಾಲೆಯಲ್ಲಿ ನಡೆದಿದೆ. 9 ನೇ ತರಗತಿ ವಿದ್ಯಾರ್ಥಿ ಫಯಾಜ್ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಯಾಗಿದ್ದಾನೆ. ಮುಖ್ಯೋಪಾಧ್ಯಾಯ ಹೆಚ್.ಸತ್ಯನಾರಾಯಣ್ ರವರು ಬುಧವಾರ ಬೈಕ್ ಚಾಲನೆ ಮಾಡುವ ವೇಳೆ, ಸುಮಾರು 60 ಸಾವಿರ ರೂ.ಮೌಲ್ಯದ ಬಂಗಾರದ ಉಂಗುರವನ್ನು ಶಾಲೆಯಲ್ಲಿ ಕಳೆದುಕೊಂಡಿದ್ದರು. ಗುರುವಾರ ಬೆಳಿಗ್ಗೆ ಈ ಉಂಗುರ ಫಯಾಜ್ ಗೆ ಸಿಕ್ಕಿದ್ದು, ಅದನ್ನು ಶಿಕ್ಷಕರಿಗೆ ಹಿಂದಿರುಗಿಸಿದ್ದ. ವಿದ್ಯಾರ್ಥಿ ಪ್ರಾಮಾಣಿಕತೆ ಮೆಚ್ಚಿ, ಶಿಕ್ಷಕರು ಆತನಿಗೆ ಬಹುಮಾನ ನೀಡಿ ಅಭಿನಂದಿಸಿದ್ದಾರೆ‌. ಇದಕ್ಕೆ ಬಿಇಓ, ಶಿಕ್ಷಕ ವೃಂದ ಅಭಿನಂದಿಸಿದೆ.

Exit mobile version