Site icon TUNGATARANGA

ಶಿವಮೊಗ್ಗ | ಸಿಗಂದೂರಿನಲ್ಲಿ ಮಕರ ಸಂಕ್ರಮಣ ಜಾತ್ರೆ ರದ್ದು

ಶಿವಮೊಗ್ಗ: ಸಾಗರ ತಾಲ್ಲೂಕಿನ ಸಿಗಂದೂರಿನಲ್ಲಿ ಮಕರ ಸಂಕ್ರಮಣ ಜಾತ್ರೆಯನ್ನು ಸರಳವಾಗಿ ಆಚರಿಸಲು ಸಮಿತಿ ನಿರ್ಧರಿಸಿದೆ.


ದೇವಿಯ ದರ್ಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಜಾತ್ರೆಯಲ್ಲಿ ವಿಶೇಷ ಸೇವೆ, ಪೂಜೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ಸಿಗಂದೂರು ದೇವಸ್ಥಾನದಲ್ಲಿ ಎರಡು ದಿನಗಳ ಬದಲು ಜನವರಿ ೧೪ರಂದು ಒಂದೇ ದಿನ ಜಾತ್ರೆಯ ಎಲ್ಲಾ ಪೂಜಾ ಕೈಂಕರ್ಯಗಳು ಮುಗಿಯಲಿದೆ.


ಸಾರ್ವಜನಿಕರ ಸಹಭಾಗಿತ್ವಕ್ಕೆ ಅವಕಾಶವಿಲ್ಲ. ಜಾತ್ರೆಯ ಮೊದಲ ದಿನ ೧೪ರಂದು ಬೆಳಿಗ್ಗೆ ೮ಕ್ಕೆ ಮೂಲ ಸ್ಥಳವಾದ ಸೀಗೆ ಕಣಿವೆಯಿಂದ ಪ್ರಥಮ ಪೂಜೆಗೆ ಧರ್ಮಾಧಿಕಾರಿಗಳು ಹಾಗೂ ಕುಟುಂಬಸ್ಥರ ಜೊತೆಗೆ ದೇವಸ್ಥಾನದ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಪ್ರವೇಶವಿಲ್ಲ. ಆ ದಿನ ಬೆಳಿಗ್ಗೆ ೭ರಿಂದ ರಾತ್ರಿ ೭ರವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ’ ಎಂದು ಸಮಿತಿಯ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯಿಸಿದರು.


ಯಾವುದೇ ವಿಶೇಷ ಪೂಜೆ ಹಾಗೂ ಸೇವೆಗಳಿಗೆ ಭಕ್ತರಿಗೆ ಅವಕಾಶವಿಲ್ಲ. ವೇದಿಕೆ ಕಾರ್ಯಕ್ರಮಗಳನ್ನೂ ರದ್ದುಮಾಡಿದ್ದು, ೨ನೇ ದಿನವಾದ ಶನಿವಾರ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ದೇವರ ದರ್ಶನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಭಕ್ತರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು’ ಎಂದು ಧರ್ಮಾಧಿಕಾರಿ ಡಾ. ಎಸ್.ರಾಮಪ್ಪ ಮನವಿ ಮಾಡಿದ್ದಾರೆ.

Exit mobile version