ಶಿವಮೊಗ್ಗ, ಜ.10:
ನಿಜಕ್ಕೂ ಇದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರಿಗೆ ಗೊತ್ತಿರಲಿಕ್ಕಿಲ್ಲ. ಹಾಗೆಯೇ ಸ್ಮಾರ್ಟ್ಸಿಟಿಯ ನಿರ್ದೇಶಕ ಚಿದಾನಂದ ವಠಾರೆ ಅವರಿಗೆ ಗೊತ್ತಿರಲಿಕ್ಕಿಲ್ಲ.
ವಾರ್ತಾಇಲಾಖೆ ಮಾಹಿತಿಯಂತೆ ಅಲ್ಲಿಗೆ ಬಂದಿದ್ದ ಪತ್ರಕರ್ತರಿಗೆ ಕೆಲ ಇಂಜಿನಿಯರ್ಗಳ ಕಿತಾಪತಿಯಿಂದ ಮಹಿಳಾ ನೌಕರರೊಬ್ಬರು ಮಾದ್ಯಮದವರನ್ನು ಹೊರಗೆ ನಿಲ್ಲಿಸಿದ್ದರು.
ಕೆಲ ಮಾದ್ಯಮದವರು ಯಾಕೆ ಬಿಡೋಲ್ಲ, ನಮ್ಮನ್ನೇಕೆ ಕರೆದಿರಿ ಎಂದು ಪ್ರಶ್ನಿಸಿದಾಗ ನಳಿನಾ ಮೇಡಂ ಹೆಸರು ಕೇಳಿಬಂತು. ಮೀಟಿಂಗ್ ನಡೆದ ಮೇಲೆ ಮಾಹಿತಿ ಹೇಳುವುದಾದರೆ ಇದೊಂದು ಗುಪ್ತ ಸಭೆಯೇ,
ವ್ಯವಹಾರದ ವಿಷಯವಿತ್ತೇ ಎಂಬ ಅನುಮಾನ ಕಾಡಿದಂತೂ ಸತ್ಯ. ಕೊನೆಗೆ ಎಲ್ಲಾ ಮಾದ್ಯಮದವರು ಒಳ ಹೋದರು. ಅಷ್ಟರಲ್ಲಿ ನಡೆದಿದ್ದ ಮೀಟಿಂಗ್ ಆದರೂ ಏನು ಅನುಮಾನ ಕಾಡಿತ್ತು.