ಕೊರೊನಾ ಜಾಗೃತಿಗೆ ಪಾಲಿಕೆಯ ಹತ್ತು ತಂಡಗಳನ್ನು ರಚಿಸಿದ ಆಯುಕ್ತ ಚಿದಾನಂದ್ ವಠಾರೆ,
ಶಿವಮೊಗ್ಗ, ಜ.09:
ಶಿವಮೊಗ್ಗ ನಗರದಲ್ಲಿ ಕೊರೊನಾ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಠಾರೆ ಅವರು ಪಾಲಿಕೆಯ ಸುಮಾರು ಎಪ್ಪತ್ತೈದು ಅಧಿಕಾರಿಗಳು ಹಾಗೂ ನೌಕರರ ಹತ್ತು ತಂಡಗಳನ್ನು ರಚಿಸಿದ್ದಾರೆ.
ವೀಕೆಂಡ್ ಕರ್ಫ್ಯೂವಿನ ನಿನ್ನೆ ಹಾಗೂ ಇಂದು ಮಾಸ್ಕ್ ಜಾಗೃತಿಗೆ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ನೆರವಿನೊಂದಿಗೆ ಮಾಸ್ಕ್ ಧರಿಸದೆ ಬಂದವರಿಗೆ ಕಿವಿಮಾತು ಹೇಳುವ ಹಾಗೂ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇಂದು ಎಪಿಎಂಸಿ ಸೇರಿದಂತೆ ನಗರದೆಲ್ಲೆಡೆ ಈ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಪಾಲಿಕೆ ಆರೋಗ್ಯವಿಭಾಗದ 10 ಜನ ಹೆಲ್ತ್ ಇನ್ ಸ್ಪೆಕ್ಟರ್ ಗಳ ತಂಡದಲ್ಲಿ ಪಾಲಿಕೆಯ ಆರೋಗ್ಯ ವಿಭಾಗ ಹಾಗೂ ಕಂದಾಯ ವಿಭಾಗದ ಎ.ಇ.ಇಗಳು, ಪರಿಸರ ಅಭಿಯಂತರರು, ಬಿಲ್ ಕಲೆಕ್ಟರ್ ಗಳು, ಎಫ್ ಡಿಸಿಗಳು, ಎಸ್ ಡಿಸಿಗಳು ಹಾಗೂ ಡೇನಲ್ಮ್ ವಿಭಾಗದ ಸುಮಾರು ಎಪ್ಪತೈದು ಜನರ ಹತ್ತು ತಂಡಗಳು ಕರ್ತವ್ಯ ನಿರ್ವಹಿಸುತ್ತವೆ.
ಎಪಿಎಂಸಿಯಲ್ಲಿ ವಠಾರೆ ಅವರೇ ಇಂದು ನೇರ ಅಖಾಡಕ್ಕಿಳಿದು ಜಾಗೃತಿ ಮೂಡಿಸುತ್ತಿದ್ದಾರೆ.
ನಿನ್ನೆ ಹಾಗೂ ಇಂದು ಬೆಳಿಗ್ಗೆಯಿಂದಂದ ಅಲ್ಲಲ್ಲಿ ಓಡಾಡುತ್ತಿದ್ದ ಜನರನ್ನು ಹಾಗೂ ವಾಹನ ಸವಾರರನ್ನು ಗಮನಿಸಿ ಮಾಸ್ಕ್ ಧರಿಸದೆ ರಸ್ತೆಗಿಳಿದಿರುವುವರಿಗೆ ಫೈನಲ್ ಕಿವಿಮಾತು ಹಾಗೂ ದಂಡ ವಿಧಿಸಿದೆ.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಶಿವಮೊಗ್ಗದ ಪ್ರಮುಖ ಸ್ಥಳಗಳಾದ ಗೋಪಾಳ, ಗೋಪಿ ಸರ್ಕಲ್, ಎಎ ವೃತ್ತ, ಗಾಂಧಿ ಬಜಾರ್, ಪೊಲೀಸ್ ಚೌಕಿ, ಎಪಿಎಂಸಿ, ವಿದ್ಯಾನಗರ ಸೇರಿದಂತೆ ಹತ್ತಾರು ಕಡೆ ರೌಂಡ್ಸ್ ಮಾಡಿ ಮಾಸ್ಕ್ ಜಾಗೃತಿ ಮೂಡಿಸುತ್ತಿವೆ.
ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಅವರೇ ನೇರ ಅಖಾಡಕ್ಕಿಳಿದು ನಿನ್ನೆ ನಗರದ ವಿನೋಬ ನಗರ ಹಾಗೂ ಬಿಹೆಚ್ ರಸ್ತೆಯಲ್ಲಿ ಮಾಸ್ಕ್ ಹಾಕದೆ ಬಂದವರಿಗೆ ದಂಡ ವಿಧಿಸಿದ್ದಾರೆ.