Site icon TUNGATARANGA

ಶಿವಮೊಗ್ಗ | ಪಾಲಿಕೆಯ ಜನವಿರೋಧಿ ಆಡಳಿತ..!


ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ದುರಾಡಳಿತ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಪಾಲಿಕೆಯ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನವಿರೋಧಿ ಆಡಳಿತದ ಮುಖಾಂತರ ಅಧಃಪತನದತ್ತ ಸಾಗಿದೆ. ಅಧಿಕಾರಿಗಳ ಶಾಹಿಗಳ ಕೈಗೆ ಆಡಳಿತ ಒಪ್ಪಿಸಿ ಕಮಿಷನ್ ದಂಧೆಗೆ ಶಾಮಿಲಾಗಿ ಏಜೆಂಟರಾಗಿ ಭ್ರಷ್ಟಾಚಾರ ದಿವಾಳಿಯ ಅರಾಜಕತೆ ತಾಂಡವಾ ಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.


ಆಸ್ತಿ ತೆರಿಗೆ ಮತ್ತು ಖಾತೆ ಬದಲಾವಣೆಯ ಪ್ರಕ್ರಿಯೆಯಲ್ಲಿ ಬಿಜೆಪಿಯ ಸದಸ್ಯರು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಗರೀಕರು ನೇರವಾಗಿ ಪಾಲಿಕೆಗೆ ಹೋದರೆ ಅಲ್ಲಿಯ ನೌಕರರು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಬಿಜೆಪಿ ಆಡಳಿತವೇ ಕಾರಣವಾಗಿದೆ. ಲಂಚ ನೀಡದಿದ್ದರೆ ನಾಗರೀಕರ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.
ಪಾಲಿಕೆ ಆಡಳಿತವು ಶಾಸಕ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪರವರ ಕಪಿಮುಷ್ಠಿಯಲ್ಲಿರುವ ಪಾಲಿಕೆ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ಮೀತಿ ಮೀರಿದೆ. ಈಗ ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ಕೆಲಸಗಳು ಕಳಪೆಯಿಂದ ಕೂಡಿದೆ. ಕುಡಿಯುವ ನೀರಿನ ಸರಬರಾಜು ಅವ್ಯವಸ್ಥೆ ಯಿಂದ ನೀರು ವ್ಯತ್ಯಯವಾಗುತ್ತಿದೆ. ಒಳಚರಂಡಿ ಮತ್ತು ಮ್ಯಾನ್ಹೋಲ್‌ಗಳು ಬಾಯಿ ಬಿಟ್ಟುಕೊಂಡು ಮಾನವನನ್ನು ನುಂಗಲು ಕಾದು ಕುಳಿತಿವೆ. ಕಾಮ ಗಾರಿ ಆರಂಭಿಸಲು ನಿರ್ಧಿಷ್ಟ ನೀತಿ-ನಿಯಮಗಳು ಇಲ್ಲವೇ ಇಲ್ಲ. ಎಲ್ಲಾ ವ್ಯವಹಾರಗಳು ಕಮಿಷನ್ ದಂಧೆಯಲ್ಲಿ ಸೀಮಿತವಾಗಿದೆ ಎಂದು ದೂರಿದರು.


ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಹೆಚ್.ಸಿ.ಯೋಗೀಶ್, ಬಿ.ಎ.ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಮಹೇಖ್ ಷರೀಫ್, ಮಂಜುಳಾ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಎಲ್.ರಾಮೇಗೌಡ, ಸಿ.ಎಸ್.ಚಂದ್ರಭೂಪಾಲ, ಇಕ್ಕೇರಿ ರಮೇಶ್, ಎಸ್.ಪಿ.ಶೇಷಾದ್ರಿ, ಯು.ಶಿವಾನಂದ್, ದೀಪಕ್ಸಿಂ ಗ್, ಚಂದನ್, ಸೌಗಂಧಿಕ, ಸುವರ್ಣ ನಾಗರಾಜ್, ಕೆ.ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ನಾಜೀಮಾ, ಪ್ರೇಮಾ, ಎನ್.ಡಿ. ಪ್ರವೀಣ್ ಭಾಗವಹಿಸಿದ್ದರು.

Exit mobile version