ಶಿವಮೊಗ್ಗ: ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿ ಚಿತ್ರ ಮಂದಿರ ಎದುರು ರಸ್ತೆಯಲ್ಲಿ ಮತ್ತು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ 60 ಅಡಿ ರಸ್ತೆಯಲ್ಲಿ ಆರೋಪಿಗಳು ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ಬರೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಕಛೇರಿಯ ಕುಮಾರಸ್ವಾಮಿ, ಪೊಲೀಸ್ ನಿರೀಕ್ಷಕರು, ಡಿಸಿಐಬಿ ವಿಭಾಗ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಇಂದು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿತರನ್ನು ಬಂಧಿಸಿ, ಆರೋಪಿತರಿಂದ ರೂ 26,110/- ನಗದು ಹಾಗೂ ಸಂಬಂಧಿಸಿದ ದಾಖಲೆಗಳನ್ನು ಅಮಾನತ್ತು ಪಡಿಸಿಕೊಂಡು, ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.
ಪ್ರಕರಣಗಳ ವಿವರ
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿ ಚಿತ್ರ ಮಂದಿರ ಎದುರು ರಸ್ತೆ, ಆರೋಪಿಯ ವಿವರ- ಹರೀಶ್ 34 ವರ್ಷ ವಾಸ ಹೊಸಮನೆ ಶಿವಮೊಗ್ಗ. ಆತನಿಂದ ವಶಪಡಿಸಿಕೊಂಡ ಮಾಲು- ರೂ 20,570/- ನಗದು ಹಾಗೂ ಸಂಬಂಧಿಸಿದ ದಾಖಲೆಗಳು.
ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆ ವಿನೋಬನಗರ, ಆರೋಪಿಯ ವಿವರ- ರಮೇಶ 40 ವರ್ಷ ವಾಸ ಹೊಸಮನೆ ಶಿವಮೊಗ್ಗ, ವಶಪಡಿಸಿಕೊಂಡ ಮಾಲು- ರೂ 5,540/- ನಗದು ಹಾಗೂ ಸಂಬಂಧಿಸಿದ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಅಧೀಕ್ಷಕರು ಡಿಸಿಐಬಿ ದಾಳಿಯನ್ನು ಅಭಿನಂಧಿಸಿದ್ದಾರೆ.