Site icon TUNGATARANGA

ಸಂಸದ ಬಿವೈ ರಾಘವೇಂದ್ರ ಅವಿರತ ಪ್ರಯತ್ನದ ಫಲ, ಶಿವಮೊಗ್ಗದಲ್ಲಿ ಆಯುಷ್ ವಿವಿ

ರಾಜ್ಯ ಸರ್ಕಾರದ ಅನುಮೋದನೆ ಫಲ: ರಾಘವೇಂದ್ರ ಅಭಿನಂದನೆ

ಶಿವಮೊಗ್ಗ ಡಿ.24:
ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಸಂಸದರಾದ ಬಿವೈ ರಾಘವೇಂದ್ರ ಅವರನ್ನುಶ್ಲಾಘಿಸಲೇಬೇಕು.

ರಾಘವೇಂದ್ರ ಅವರು ಶಿಕಾರಿಪುರ ಅಷ್ಟೇ ಅಲ್ಲ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸದಾ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವುದರ ಫಲವಾಗಿ ಹತ್ತಾರು ಮಹತ್ತರ ಯೋಜನೆಗಳು, ಕಾರ್ಯಗಳು ನಡೆದಿವೆ ಹಾಗೂ ಆರಂಭಗೊಂಡಿವೆ.


ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಹಿರಿಮೆ ಎಂಬಂತೆ ದೇಶದಲ್ಲಿಯೇ ವಿಶೇಷ ಹಾಗೂ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಎಂಬಂತೆ ಆಯುಷ್ ವಿಶ್ವವಿದ್ಯಾಲಯ ಮಂಜೂರಾಗಿದೆ.

ಇದಕೆ ರಾಜ್ಯ ಸರ್ಕಾರವೂ ಅನುಮೋದನೆ ನೀಡಿದೆ.
ಈ ಯಶಸ್ಸಿನ ಹಿಂದೆ ಸಂಸದರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ ವಿಭಾಗಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಕೊಟ್ಟು ಕಾರ್ಯನಿರ್ವಹಿಸಿದ್ದೇ ಆಗಿದೆ. ಇದಕೆ ಪೂರಕವಾಗಿ ಸಂಸದರ ಸೂಚನೆ ಪರಿಪಾಲಿಸುವ ಕೆಲ ಅಧಿಕಾರಿಗಳು ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿರುವುದೇ ಆಗಿದೆ.
ಶಿವಮೊಗ್ಗದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಂದು ಅಭಿವೃದ್ಧಿಯ ಗರಿ- ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆ ಸರ್ಕಾರದ ಅನುಮೋದನೆ ದೊರೆತಿದೆ.


ದಕ್ಷಿಣ ಭಾರತದಲ್ಲಿಯೇ ಆಯುರ್ವೇದ, ಯುನಾನಿ, ಯೋಗ, ಸಿದ್ಧ, ಹೋಮಿಯೋಪತಿ ಗಳನ್ನೊಳಗೊಂಡ ಪ್ರಪ್ರಥಮ ಆಯುಷ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯವನ್ನು ಶಿವಮೊಗ್ಗದ ಸೋಗಾನೆ ಗ್ರಾಮದಲ್ಲಿ ಸ್ಥಾಪಿಸಲು ಅನುಮೋದನೆ ನೀಡುವುದರೊಂದಿಗೆ ಆರಂಭಿಕ ವೆಚ್ಚವಾಗಿ ರೂ 20 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ.


ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಜನತೆಯ ಪರವಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಯುಷ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಸಾಕಷ್ಟು ಪರಿಶ್ರಮ ಹಾಗೂ ಪ್ರಯತ್ನದ ಮೂಲಕ ಸಾಕಾರಗೊಳಿಸಿದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ‌‌ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸಿದ್ದಾರೆ.

Exit mobile version