Site icon TUNGATARANGA

ಶಿವಮೊಗ್ಗದಲ್ಲಿ ಡಿ.26ರಂದು ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ.., ಮರೆಯದೇ ಬನ್ನಿ

ಶಿವಮೊಗ್ಗ,ಡಿ.೨೨: ಸಪ್ತಕ ಸಂಸ್ಥೆ, ಬೆಂಗಳೂರು ಹಾಗೂ ಪಂ.ಡಿ. ವಿ. ಕಾಣೆಬುವಾ ಪ್ರತಿಷ್ಠಾನ, ಪುಣೆ ಇವರ ಸಂಯುಕ್ತಾಶ್ರಯದಲ್ಲಿ ಭಾರತರತ್ನ ಪಂ.ಭೀಮಸೇನ್ ಜೋಶಿರವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಡಿ.೨೬ ಸಂಜೆ ೫.೩೦ಕ್ಕೆ ಕುವೆಂಪು ರಂಗ ಮಂದಿರದಲ್ಲಿ ವಿಶೇಷವಾದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಸಪ್ತಕ ಸಂಸ್ಥೆಯ ಸಂಚಾಲಕ ಜಿ.ಎಸ್.ಹೆಗಡೆ ಮಾತನಾಡಿ, ಕಾರ್ಯಕ್ರಮಕ್ಕೆ ಸ್ನಾನಿಕ ಸಹಕಾರವನ್ನು ಶಿವಮೊಗ್ಗದ ಸಪ್ತಸ್ವರ ಸಂಗೀತ ಸಭಾ ನೀಡಿದ್ದು, ಪ್ರಾರಂಭದಲ್ಲಿ ಯುವ ಉತ್ಸಾಹಿ ಗಾಯಕ ಕೇರಳದ ಕಣೂರಿನ ವಿನಯ್ ರಾಮದಾಸನ್ರಪವರು ಗಾಯನ ಪ್ರಸ್ತುತ ಪಡಿಸಲಿದ್ದಾರೆ. ನಂತರ ದೇಶದ ಸುಪ್ರಸಿದ್ಧ ಪುಣೆಯ ಗಾಯಕಿ ಮಂಜುಷಾ ಪಾಟೀಲ್ ಅದ್ಭುತ ಆಕರ್ಷಕ ಗಾಯನ ಕಾರ್ಯಕ್ರಮವಿದೆ ಎಂದರು.

ಎರಡೂ ಕಾರ್ಯಕ್ರಮಗಳಲ್ಲಿ ಧಾರವಾಡದ ಪಂ. ಶ್ರೀಧರ ಮಾಂಡ್ರೆ ಹಾಗೂ ಗುರುಪ್ರಸಾದ ಹೆಗಡೆ ಇವರ ತಬಲಾ ಹಾಗೂ ಹಾರ್ಮೋನಿಯಂ ವಾದಕರಾಗಿ ಸಹಕರಿಸಲಿದ್ದಾರೆ ಎಂದರು.ಸಪ್ತಕ ಸಂಸ್ಥೆ ಕಳೆದ ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿ ವಿವಿಧೆಡೆ, ರಾಜ್ಯದ ಅನೇಕ ಹಳ್ಳಿ, ಪಟ್ಟಣ, ಜಿಲ್ಲಾ ಸ್ಥಳಗಳಲ್ಲದೆ ಮುಂಬೈ, ಹೈದರಾಬಾದ್, ನಾಸಿಕ್, ಕೊಲ್ಲಾಪುರದಲ್ಲೆಲ್ಲ ಸುಮಾರು ೪೦೦ಕ್ಕೂ ಹೆಚ್ಚು ಕಾರ್ಯಕ್ರಮ ಏರ್ಪಡಿಸಿ ಸುಮಾರು ೧೮೦೦ ಹಿರಿ ಕಿರಿಯ ಕಲಾವಿದರಿಗೆ ವೇದಿಕೆ ಒದಗಿಸಿದೆ. ಯಾವ ಕಾರ್ಯಕ್ರಮಕ್ಕೂ ಟಿಕೆಟ್ ಅಥವಾ ದೇಣಿಗೆ ಪಾಸ್ ಇಡದೇ ಉಚಿತವಾಗಿ ಕಾರ್ಯಕ್ರಮ ನೀಡಿದೆ ಎಂದರು.

ವಿದ್ಯಾರ್ಥಿ ವೇತನ, ಸಂಗೀತ ಉಪಕರಣಗಳ ಕೊಡುಗೆ, ಸಂಗೀತ ಕಾರ್ಯಾಗಾರ, ಹೀಗೆ ಹತ್ತು ಹಲವು ರೀತಿಯಿಂದ ಶಾಸ್ತ್ರೀಯ ಸಂಗೀತದ ಪ್ರಚಾರ, ಪುಸಾರಕ್ಕಾಗಿ ಅವಿರತವಾಗಿ ದುಡಿಯುತ್ತಿದೆ ಸಪ್ರಕ ಸಂಸ್ಥೆ. ಶುದ್ಧ ಶಾಸ್ತ್ರೀಯ ಸಂಗೀತ ಹಾಗೂ ಇತರ ಸಾಂಸ್ಕೃತಿಕ/ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ’ಸಪ್ತಕ’ ದಿಂದ ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಕೊರೋನಾ ಕಾರಣದಿಂದಾಗಿ ಸ್ತಬ್ಬವಾಗಿ ಸಮೂಹದಲ್ಲಿ ಕಲೆತು, ಬೆರತು ಸಂತೋಷ ಪಡೆಯಬಹುದಾದ ಸಂಗೀತ ಹಾಗೂ ಇತರ ಕಾರ್ಯಕ್ರಮಗಳು ಇದೀಗ ಮರುಚಾಲನೆ ಪಡೆಯುತ್ತಿರುವುದು ಸಂತಸ ತಂದಿದೆ ಎಂದರು.ಹೆಚ್ಚಿನ

ಮಾಹಿತಿಗಾಗಿ ಜಿ.ಎಸ್.ಹೆಗಡೆ – ೭೦೧೯೪೩೪೯೯೨/೯೫೩೫೫೧೧೮೮೮, ವಿವೇಕಾನಂದ ನಾಯಕ – ೯೪೮೦೪೧೬೩೫೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದ ಸಪ್ತಸ್ವರ ಸಂಗೀತ ಸಭಾದ ಗೌರವಾಧ್ಯಕ್ಷ ಭಾಸ್ಕರ್ ಜಿ.ಕಾಮತ್, ಅಧ್ಯಕ್ಷ ಅರುಣ್ ಹಂಪಿಹೊಳಿ, ಕಾರ್ಯದರ್ಶಿ ಅಚ್ಚುತ ರಾವ್, ವಿವೇಕಾನಂದ ನಾಯಕ್, ದೇವಕುಮಾರ್ ಉಪಸ್ಥಿತರಿದ್ದರು.

Exit mobile version