Site icon TUNGATARANGA

ಮಜ್ಜಿಗೆ ಮಾರುವ ಮೂಲಕ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡಿದ್ದೇಕೆ ಗೊತ್ತಾ?

ಸೇವೆ ಖಾಯಮಾತಿ ಆಗ್ರಹಿಸಿರುವ ದರಣಿಗೆ ಐದನೇ ದಿನ

ಶಿವಮೊಗ್ಗ,ಡಿ.೨೨: ತಮ್ಮ ಸೇವೆಯನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ೫ ನೇ ದಿನವಾದ ಇಂದು ಮಜ್ಜಿಗೆ ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ಕಳೆದ ೫ ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ರಾಜ್ಯದ ೪೩೦ ಪ್ರಥಮದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆಯೇ ಇಲ್ಲವಾಗಿದೆ.

ಸರ್ಕಾರದ ಸೌಲಭ್ಯಗಳ್ಯಾವು ಅವರಿಗೆ ಸಿಗುತ್ತಿಲ್ಲ. ಅತಿಥಿ ಉಪನ್ಯಾಸಕರ ಸೇವೆಯನ್ನು ನಿಯಮ ೧೪ ರ ಅಡಿಯಲ್ಲಿ ವಿಲೀನಗೊಳಿಸಬೇಕು. ಅವರನ್ನು ಕಾಯಂಗೊಳಿಸಬೇಕು. ಕಾಯಂಗೊಳಿಸುವವರೆಗೂ ಅಂದರೆ ಸೇವಾ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವವರೆಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಅತಿಥಿ ಉಪನ್ಯಾಸಕರು ಹೀಗೆ ಮಜ್ಜಿಗೆ ಮಾರಾಟ ಮಾಡಿ ಜೀವನ ಸಾಗಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ. ಹೆಚ್. ಸೋಮಶೇಖರ್ ಶಿಮೊಗ್ಗಿ, ಖಜಾಂಚಿ ರಾಜೇಶ್ ಕುಮಾರ್, ಜಿಲ್ಲಾಧ್ಯಕ್ಷ ಸರ್ವಜ್ಞಮೂರ್ತಿ, ಸತೀಶ್ ಮೊದಲಾದವದ್ದರು.

Exit mobile version