Site icon TUNGATARANGA

ಕೆಬಿ ಪ್ರಸನ್ನಕುಮಾರ್ ಮನೆಗೆ ಮೈಸೂರಿನ ಅರ್ಜುನ ಅವಧೂತ ಮಹಾರಾಜ್ ಗುರೂಜಿ.., ಶ್ರೀಗಳಿಂದ ಆಶೀರ್ವಚನ

ಪ್ರಸನ್ನಕುಮಾರ್ ದಂಪತಿಗಳು ಗುರುಗಳಿಗೆ ಪಾದಪೂಜೆ ನೇರವೇರಿಸಿದರು

ಶಿವಮೊಗ್ಗ, ಡಿ.21

ಗುರುಗಳ ಸಾನ್ನಿಧ್ಯ ಸಂತೃಪ್ತಿ ನೀಡಲಿದೆ  ಮನಸ್ಸಿಗೆ ಹರ್ಷ-ಸ್ಫೂರ್ತಿ ನೀಡುತ್ತದೆ ಎಂದು ಮೈಸೂರಿನ ಅರ್ಜುನ ಅವಧೂತ ಮಹಾರಾಜ್ ಗುರೂಜಿ ಅವರು ಹೇಳಿದರು.

ಅವರು ಇಂದು ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು ಗುರುವಿನ ಮೇಲಿನ ನಂಬಿಕೆಯೇ ಮಾನಸಿಕ ಸಮಾಧಾನ ತರುವಂತದ್ದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗುರು ಎಂಬ ಅರ್ಥಪೂರ್ಣ ಶಬ್ಧ ನೇಪಥ್ಯಕ್ಕೆ ಸರಿದಿದೆ. ಜನರಲ್ಲಿ ಗುರುಗಳನ್ನು ನೋಡುವ ದೃಷ್ಠಿಕೋನ ಬದಲಾಗಿರುವುದು ವಿಷಾಧದ ಸಂಗತಿ ಎಂದ ಅವರು, ಗುರುಗಳ ಸನ್ನಿಧಾನ ಕಾಲ, ಹಣ ಮತ್ತು ಸಂಪತ್ತು ಎಲ್ಲವನ್ನೂ ಮೀರಿದ ಅಮಿತಾನಂದ ತರಲಿದೆ ಎಂದರು.

ನೊಂದ ಮನಸುಗಳನ್ನು ಸಂತೈಸುವ, ಸಂಕಷ್ಟದಲ್ಲಿರುವವರಿಗೆ ಸಮಾಧಾನ ನೀಡುವ ಕಾರ್ಯ ಗುರುಗಳಿಂದ ಆಗಬೇಕು. ಗುರುವಿನ ಕಾರ್ಯ ಜಾತಿ-ಧರ್ಮ, ಬಡವ-ಶ್ರೀಮಂತ ಎಂಬ ಎಲ್ಲೆಗಳನ್ನು ಮೀರಿದ್ದಾಗಿದೆ. ಎಲ್ಲರನ್ನೂ ಸಂತೋಷ, ಸಮಭಾವದಿಂದ ಕಾಣುವ, ಎಲ್ಲರಲ್ಲೂ ಸಮತೋಲನ ಕಾಪಾಡುವುದು ಗುರುಪರಂಪರೆಯ ಪ್ರಧಾನ ಕಾರ್ಯವಾಗಿದೆ. ಸರ್ವರನ್ನೂ ಸಮಭಾವದಿಂದ ಕಾಣುವ, ಸಮಭಾವದಿಂದ ನೋಡುವ, ಧರ್ಮದ ಮಾರ್ಗದಲ್ಲಿ ನಡೆಸುವ, ಅವರನ್ನು ಸಂರಕ್ಷಿಸುವ ಕಾರ್ಯ ಗುರುಗಳ ಮಾರ್ಗದರ್ಶನದಿಂದ ಆಗಲಿದೆ ಎಂದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಕೋಟ್ಯಾಂತರ ಜನರಿದ್ದರೂ, ಸಮೀಪದಲ್ಲೇ ಇದ್ದರೂ ಎಲ್ಲರಿಗೂ ಸತ್ಸಂಗದಲ್ಲಿ ಭಾಗವಹಿಸುವ ಯೋಗ ಲಭ್ಯವಾಗುವುದಿಲ್ಲ. ಗುರುಗಳು ಭಗವಂತನ ಸೂಚನೆಯಂತೆ ಕಾರ್ಯನಿರ್ವಹಿಸುವ ಪ್ರತಿನಿಧಿಗಳಾಗಿರುತ್ತಾರೆ ಎಂದರು. ಶಿವಮೊಗ್ಗ ಜಿಲ್ಲೆಯ ಅನೇಕ ಸಾಧು-ಸತ್ಪುರುಷರ, ಮಹಾನ್ ಯುಗಪುರುಷರು ತಪಸ್ಸನ್ನಾಚರಿಸಿದ ಪುಣ್ಯಭೂಮಿ. ಈ ದೇಶದ ಅನೇಕ ಮಹಾಪುರುಷರ ತಪಸ್ಸನ್ನಾಚರಿಸಿ, ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿದ್ದಾರೆ. ಅವರು ನಿರಂತರವಾಗಿ ಆಚರಿಸಿದ ಪೂಜಾನುಷ್ಠಾನದಿಂದಾಗಿ ಸಂಪಾದಿಸಿದ ಪುಣ್ಯದ ಫಲ ದೇಶವನ್ನು ನೆರಳಿನಂತೆ ಕಾಪಾಡುತ್ತಿದೆ ಎಂದರು.

Exit mobile version