Site icon TUNGATARANGA

ಪದವೀಧರರ ಸಹಕಾರ ಸಂಘದ ವಾರ್ಷಿಕ ಸಭೆ ಆರಂಭ

ಶಿವಮೊಗ್ಗ, ಡಿ.18:
ಇಲ್ಲಿನ ಪದವೀಧರರ ಸಹಕಾರ ಸಂಘದ 46 ನೇ ಸರ್ವಸದಸ್ಯರ ಸಭೆ ಇಂದು ಅಧ್ಯಕ್ಷ ಎಸ್. ಪಿ. ದಿನೇಶ್ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು.
ಪದವೀಧರರ ಸಹಕಾರ ಸಂಘ 2020-21ನೇ ಸಾಲಿನಲ್ಲಿ 127.36 ಕೋ.ರೂ. ವ್ಯವಹಾರ ನಡೆಸಿ 1.59 ಕೋ.ರೂ. ನಿವ್ವಳ ಲಾಭಗಳಿಸಿರುವುದನ್ನು ಸದಸ್ಯರು ಶ್ಲಾಘಿಸಿದರು. ನಮ್ಮ ಸಂಘದ ಡಿಪಾಜಿಟ್ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸದಸ್ಯರಾದ ಡಾ ಸತೀಶ್ ಕುಮಾರ್ ಶೆಟ್ಟಿ ಒತ್ತಾಯಿಸಿದರು.
ಕಣ್ವ, ಪಿಎಲ್ ಡಿಗಳಲ್ಲಿ ಹಣ ಹೂಡಿಕೆ ಬೇಡ. ಲಾಭ ಎಷ್ಟಾದರೂ ಬರಲಿ. ನಮ್ಮ ಹಣ ಸೇಫಾಗಿರಲಿ ಎಂದು ಚಂದ್ರ ಮೌಳಿ ಸಲಹೆ ನೀಡಿದರು.
ಅಧ್ಯಕ್ಷರು ಮಾತನಾಡಿ ನಾವು ಸದಸ್ಯರ ಅಭಿಪ್ರಾಯದಂತೆ ನಾವು ಹಣ ಹೂಡಿಕೆ ಮಾಡುತ್ತೇವೆ ಎಂದರು.


3.01 ಕೋ.ರೂ.ನಿವ್ವಳ ಷೇರು ಬಂಡವಾಳ ಹೊಂದಿದ್ದು, ಆಪದ್ದನ ನಿಧಿಯಲ್ಲಿ 2.16 ಕೋ.ರೂ. ಹಾಗೂ ಕಟ್ಟಡ ನಿಧಿಯಲ್ಲಿ 2.66 ಕೋ.ರೂ. ಮತ್ತು ಇತರೆ ನಿಧಿಗಳಲ್ಲಿ 2.42 ಕೋ.ರೂ, ಇದ್ದು, ಸದಸ್ಯರಿಂದ 52.23 ಕೋ.ರೂ.ಠೇವಣಿ ಸಂಗ್ರಹಿಸಿದ್ದು, 44.88 ಕೋ.ರೂ.ಸಾಲ ನೀಡಲಾಗಿದೆ. ಸಾಲ ವಸೂಲಾತಿಯೂ ಶೇ.0.76ರಷ್ಟಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಸಂಘವು ಲಾಭಗಳಿಸುವುದಷ್ಟೆ ಅಲ್ಲದೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದೆ ಎಂದರು.
ಸಂಘದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸಂಘದ ಶಾಖಾ ಕಚೇರಿ ಹಾಗೂ ಉದ್ದೇಶಿತ ಶಿಕ್ಷಣ ಸಂಸ್ಥೆ ಆಡಳಿತ ಕಚೇರಿಗಾಗಿ ಕಟ್ಟಡ ನಿರ್ಮಿಸಲು ಕೃಷಿನಗರದಲ್ಲಿ 40×60 ಅಳತೆಯ ನಿವೇಶನ ಖರೀದಿಸಿ ಸಂಘದ ಹೆಸರಿಗೆ ನೋಂದಣಿ ಮಾಡಿಕೊಳ್ಳಲಾಗಿದೆ ಅಲ್ಲಿ ಭವನ ಕಟ್ಟಿ ಶಾಖೆ ಆರಂಭಿಸಲು ಸಭೆಯ ಒಪ್ಪಿಗೆ ಕೇಳಲಾಯಿತು.


ಇದೇ ಸಂದರ್ಭದಲ್ಲಿ ರಕ್ತದಾನ ಹಾಗೂ ಲಸಿಕೆ ಹಾಕುವಶಿಬಿರ ಹಮ್ಮಿಕೊಂಡಿತ್ತು, ಸದಸ್ಯರಿಗೆ ಕೋವಿಡ್ ಲಸಿಕೆ ನೀಡಲಾಗುವುದು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಜೋಗದ ವೀರಪ್ಪ, ಪಿ. ರುದ್ರೇಶ್, ಹೆಚ್.ಸಿ.ಸುರೇಶ್, ಎಸ್ ಹೆಚ್ ಪ್ರಸನ್ನ, ಎಸ್.ರಾಜಶೇಖರ್, ಎಸ್.ಕೆ.ಕೃಷ್ಣಮೂರ್ತಿ, ಬಿ.ಜಗದೀಶ್, ಭುವನೇಶ್ವರಿ, ಡಾ.ಯು ಚಂದ್ರಶೇಖರ್, ಯು.ರಮ್ಯಾ, ಕಾರ್ಯದರ್ಶಿ ಟಿ.ವಿ. ಗೋಪಾಲಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.

Exit mobile version