ಶಿವಮೊಗ್ಗ, ಡಿ.೧೮:
ಕೃಷಿಕರಿಗೆ ಅನುಕೂಲವಾಗುವಂತಹ ಟ್ರೇಡರ‍್ಸ್‌ಗಳಿಂದ ಕೃಷಿ ಕಾರ್ಯಗಳು ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ನಡೆಯಲು ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ತಿಳಿಸಿದರು.
ಅವರು ಇಂದು ಮದ್ಯಾಹ್ನ ಶಿವಮೊಗ್ಗ ಓ.ಟಿ.ರಸ್ತೆಯ ಕೃಷಿ ರಸ್ತೆಯ ಆವರಣದಲ್ಲಿನ ಕೃಷಿಕ ಸಮಾಜದ ಕಟ್ಟಡದಲ್ಲಿ ಆರಂಭಗೊಂಡ ತುಳಸಿ ಟ್ರೇಡರ‍್ಸ್‌ನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನ್ಯದೇಶಗಳಲ್ಲಿ ಕೃಷಿಯ ಉತ್ಪಾದನೆ ಹೆಚ್ಚಾಗುವ ಜೊತೆಗೆ ಯಂತ್ರೋಪಕರಣಗಳ ಬಳಕೆಯಿಂದ ಕೃಷಿ ವೆಚ್ಚವೂ ಸಹ ಕಡಿಮೆಯಾಗುತ್ತದೆ. ಇಂತಹ ಯಂತ್ರೋಪಕರಣಗಳು ಸಹಾಯಕವಾಗಲಿವೆ ಎಂದ ಅವರು ತುಳಸಿ ಟ್ರೇಡರ‍್ಸ್‌ಗೆ ಶುಭ ಕೋರಿದರು.
ಟ್ರೇಡರ‍್ಸ್ ಉದ್ಘಾಟಿಸಿದ ವಿಧಾನ ಪರಿ
ಷತ್ ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ರೈತರಿಗಷ್ಟೆ ಅನುಕೂಲವಾಗುವಂತಹ ಸಬ್ಸಿಡಿ ದೊರೆಯುವ ಇಂತಹ ಯಂತ್ರೋಪಕರಣಗಳ ವ್ಯವಸ್ಥಿತವಾದ ಟ್ರೇಡರ‍್ಸ್ ಕೃಷಿ ಸಮಾಜದ ಕಟ್ಟಡದಲ್ಲಿ ಆರಂಭಗೊಂಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್. ಮಹೇಂದ್ರ ನಾಥ್, ಶಹಾಪುರದ ರಿಕೋ ಇಟಾಲೈನ ಸಿಇಓ ಗೌತಮ್ ಕಪೂರ್ ಜೀ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಸಮಸ್ತ ಕೃಷಿಕರನ್ನು ಹಾಗೂ ಗಣ್ಯರನ್ನು ತುಳಸಿ ಟ್ರೇಡರ‍್ಸ್‌ನ ಮಾಲಿಕ ಅಬ್ದುಲ್ ರೆಹಮಾನ್ ಹಾಗೂ ಹಸೀನಾ ಭಾನು ಸ್ವಾಗತಿಸಿದರು