Site icon TUNGATARANGA

ಕೂಡ್ಲಿಗೆರೆ ಗ್ರಾಪಂ ಅಧ್ಯಕ್ಷರಾಗಿ ಉಮಾದೇವಿ ಅವಿರೋಧ ಆಯ್ಕೆ

ಭದ್ರಾವತಿ, ಡಿ.17:

ಕೂಡ್ಲಿಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಶ್ರೀಮತಿ ಉಮಾದೇವಿ ತಿಪ್ಪೇಶ್ ರವರು ಅವಿರೋದವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷರಾದ ಮಲಕ್ ಬಿ ವೀರಪ್ಪನ್ ರವರು ತಮ್ಮ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.


ಚುನಾವಣೆಯನ್ನು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕರಾದ ರಮೇಶ್ ರವರು ನಡೆಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು. ನಿಗದಿತ ಸಮಯದಲ್ಲಿ ನಾಮಪತ್ರವನ್ನು ಉಮಾದೇವಿ ಯವರು ಮಾತ್ರ ಸಲ್ಲಿಸಿದ ಕಾರಣ ಅವಿರೋದವಾಗಿ ಉಮಾದೇವಿ ತಿಪ್ಪೇಶ್ ರವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.


ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕರಾದ ರಮೇಶ್ ರವರು, ಉಪಾಧ್ಯಕ್ಷರಾದ ಕುಬೇರನಾಯ್ಕ್ ರವರು, ಸದಸ್ಯರಾದ ಜಯಣ್ಣ, ರುದ್ರೇಶ, ಸ್ವಾಮೀನಾಥ,ವಿಶ್ವನಾಥ, ನಾಗರಾಜ್, ಮಲಕ್, ಭಾಗ್ಯ, ಸಿದ್ದಮ್ಮ, ನೀಲಾಬಾಯಿ, ಪಾರ್ವತಿ ಬಾಯಿ, ಗೌರಮ್ಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಅಶೋಕ್ ರವರು, ಕಾರ್ಯಧರ್ಶಿ ಸತೀಶ್ ಗೌಡ ರವರು, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version