ಶಿವಮೊಗ್ಗ, ಡಿ.14:
ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಇಂದು ಘೋಷಣೆಯಾಗಲಿದ್ದು , ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಭಾರೀ ಮತಗಳ ಅಂತರದಿಂದ ಮುನ್ನೆಡೆ ಸಾಧಿಸಿದ್ದಾರೆನ್ನಲಾಗಿದೆ. ಈ ಫಲಿತಾಂಶ ಮತಗಳ ಸಿಂಧು ಅಸಿಂಧು ತಪಾಸಣೆಯಲ್ಲಿ ಗೊತ್ತಾದ ಸತ್ಯ. ಮತ್ತೆ ಒಮ್ಮೆ ಎಣಿಕೆ ಕಾರ್ಯ ನಡೆಯುತ್ತದೆನ್ನಲಾಗಿದೆ.
ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ಸ್ಟ್ರಾಂಗ್ ರೂಮ್ ತೆರೆದು ಮತ ಎಣಿಕೆ ಆರಂಭಿಸಲಾಯಿತು. 11:30ರ ಹೊತ್ತಿಗೆ ಲಭಿಸಿದ ಮಾಹಿತಿಯಂತೆ ಅರುಣ್ ತಮ್ಮ ಮೊದಲ ಚುನಾವಣೆಯಲ್ಲಿ ಮುನ್ನೆಡೆ ಕಾಯ್ದಿರಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಎಮ್‌ಎಲ್‌ಸಿ ಆರ್. ಪ್ರಸನ್ನಕುಮಾರ್ 1164ಮತ ಪಡೆದಿದ್ದರೆ, ಬಿಜೆಪಿ ಅರುಣ್ 2208 ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದ ಮತ ಎಣಿಕೆಯಲ್ಲಿ ಅವಲೋಕಿಸಿದಾಗ ಅರುಣ್ ಗೆಲುವು ಸಾಧಿಸಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮತ್ತಷ್ಟು ಹೆಚ್ಚಿದ್ದು ಕಾಂಗ್ರೆಸ್ ಒಂದು ಪ್ರಮುಖ ಸ್ಥಾನವನ್ನು ಕಳೆದುಕೊಂಡಂತಾಗುತ್ತದೆ..