Site icon TUNGATARANGA

ಸಾಗರ, ಅತ್ಯಾಚಾರ ಆರೋಪಿಗೆ ಜೈಲು!, ನ್ಯಾಯಾಲಯದ ತೀರ್ಪಿದು

ಶಿವಮೊಗ್ಗ, ಡಿ.09:
ಸದ್ದಿಲೈವ್.ಕಾಂ ಸಾಗರ ಮಾಹಿತಿ
ಮಹಿಳೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ವೆಸಗಿದ ಆರೋಪಿಗೆ ಸಾಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 60,000/- ರೂ ದಂಡ, ದಂಡವನ್ನು ಕಟ್ಟುವಂತೆ ಆದೇಶಿಸಿದೆ.‌ ಕಟ್ಟದಿದ್ದರೆ 02 ವರ್ಷಗಳ ಸಾದಾ ಕಾರವಾಸ ಶಿಕ್ಷೆ ನೀಡುವಙತೆ ತೀರ್ಪು ನೀಡಿದೆ.


ಸಾಗರದ ಅನಿಲ್ ಡಿಸೋಜಾ, (26) ಸಾಗರ ಟೌನ್ ನಲ್ಲಿ ವಾಸಿಯಾದ ಮಹಿಳೆಯೊಬ್ಬರನ್ನು ಆಕೆ ಕೆಲಸ ಮಾಡುತ್ತಿದ್ದ ಹೋಟೆಲ್ ನಲ್ಲಿ ರಾತ್ರಿ ಕರ್ತವ್ಯಕ್ಕೆ ಕರೆದಿದ್ದಾರೆ. ಬನ್ನಿ ಎಂದು ಹೇಳಿ ಆಕೆಯನ್ನು ಮನೆಯಿಂದ ಆಟೋದಲ್ಲಿ ಕೂರಿಸಿಕೊಂಡು ಹೋಗಿ, ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ವೆಸಗಿ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದನು.
ಆನಂತರ ಮಹಿಳೆಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಆಸ್ಪತ್ರೆಯಲ್ಲಿ ತೋರಿಸಿದಾಗ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ದಿನಾಂಕ:15-10-2017 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0456/2017 ಕಲಂ 376(2)(ಎನ್) ಐ.ಪಿ.ಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆ ನಡೆಸಿದ ಸಾಗರದ ಗ್ರಾಮಾಂತರ ಠಾಣೆಯ ಸಿಪಿಐ ಮಂಜುನಾಥ್ ಇ.ಓ ದೋಷಾರೋಪಣ ಪಟ್ಟಿಯನ್ನ 2018ನೇ ಇಸವಿ ಫೆಬ್ರವರಿ -01 ರಂದು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಪ್ರಕರಣದ ವಿಚಾರ ಸೆ ನಡೆಸಿದ ಇಲ್ಲಿ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಮಹಾಂತಪ್ಪನವರು
ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ ಅನಿಲ್ @ ಅನಿಲ್ ಡಿಸೋಜಾನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60,000/- ರೂ ದಂಡ, ದಂಡವನ್ನು ವಿಧಿಸಿದ್ದಾರೆ.


ಒಂದು ವೇಳೆ ದಂಡ ಕಟ್ಟದಿದ್ದರೆ 02 ವರ್ಷಗಳ ಸಾದಾ ಕಾರವಾಸ ಶಿಕ್ಷೆ ಹಾಗೂ ದಂಡದ ಮೊತ್ತದಲ್ಲಿ ನೊಂದ ಮಹಿಳೆಗೆ ಪರಿಹಾರವಾಗಿ 50,000/- ರೂವನ್ನ ಪಾವತಿ ಮಾಡಲು ಆದೇಶ ನೀಡಿರುತ್ತಾರೆ. ಸರ್ಕಾರದ ಅಭಿಯೋಜಕರಾಗಿ ಅಣ್ಣಪ್ಪ ನಾಯ್ಕ್ ವಾದ ಮಂಡಿಸಿದ್ದರು

Exit mobile version