ಶಿವಮೊಗ್ಗ, ಜು.22: ಮಾದಕ ದ್ರವ್ಯ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಪ್ರಕರಣಗಳನ್ನು ಪತ್ತೆಹಚ್ಚಿರುವ ಪೊಲೀಸರು 06 ಆರೋಪಿಗಳನ್ನ ಬಂಧಿಸಿ, ಸುಮಾರು 25000 ಮೌಲ್ಯದ ಮಾದಕ ದ್ರವ್ಯ ಗಾಂಜಾ ಅಮಾನತ್ತು ಪಡಿಸಿಕೊಳ್ಳಲಾಗಿದೆ.
ನಿನ್ನೆ ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪುನಗರ ಚಾನಲ್ ಹತ್ತಿರ ಮತ್ತು ಭದ್ರಾವತಿ ನಗರದ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈ ಪಾಸ್ ವೀರಾಪುರ ರಸ್ತೆಯ ಬಳಿ ಆರೋಪಿಗಳು ಮಾದಕ ದ್ರವ್ಯ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಂಬಂಧಪಟ್ಟ ಪಿಎಸ್‌ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ, 03 ಜನ ಆರೋಪಿತರನ್ನುದಸ್ತಗಿರಿ ಮಾಡಿದ್ದು, ರೂ 22,400/- ಮೌಲ್ಯದ 560 ಗ್ರಾಂ ತೂಕದ ಮಾದಕ ದ್ರವ್ಯ ಗಾಂಜಾ ಹಾಗೂ ರೂ 1,800/- ನಗದು ಹಣ ಮತ್ತು ರೂ 6,000/- ಮೌಲ್ಯದ 01 ಮೊಬೈಲ್ ಫೋನ್ ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ದ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ತುಂಗಾನಗರ ಪೊಲೀಸರು ಟಿಪ್ಪುನಗರ ಚಾನಲ್ ಹತ್ತಿರ ಆರೋಪಿಗಳಾದ ಶೊಹೇಬ್ 31 ವರ್ಷ ವಾಸ ಖಾಜಿ ನಗರ ಶಿವಮೊಗ್ಗ ಮತ್ತು ಸಯ್ಯದ್ ಹುಸೇನ್ 19 ವರ್ಷ ವಾಸ ಕೆಳಗಿನ ತುಂಗಾನಗರ ಶಿವಮೊಗ್ಗ ಅವರನ್ನ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ರೂ 2,400/- ಮೌಲ್ಯದ 100 ಗ್ರಾಂ ತೂಕದ ಮಾದಕ ದ್ರವ್ಯ ಗಾಂಜಾ ಹಾಗೂ ರೂ 1,800/- ನಗದು ಹಣ ವಶಪಡಿಸಿಕೊಳ್ಳಲಾಗಿದೆ. ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬೈ ಪಾಸ್ ವೀರಾಪುರ ರಸ್ತೆಯಲ್ಲಿ ಮೋಹನ 22 ವರ್ಷ ವಾಸ ಶಿವರಾಮ ನಗರ ಭದ್ರಾವತಿ ಎಂಬಾತನನ್ನ ಬಂಧಿಸಿ ಆತನಿಂದ ರೂ 20,000/- ಮೌಲ್ಯದ 460 ಗ್ರಾಂ ತೂಕದ ಮಾದಕ ದ್ರವ್ಯ ಗಾಂಜಾ ಹಾಗೂ ರೂ 6,000/- ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರತ್ಯೇಖ ಪ್ರಲರಣದಲ್ಲಿ ಮಾದಕ ದ್ರವ್ಯ ಗಾಂಜಾ ಮಾರಾಟ ಮಾಡುತ್ತಿದ್ದ 03 ಜನ ಆರೋಪಿಗಳನ್ನ ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯಾಂಕ್ ಮೊಹಲ್ಲಾದ ತುಂಗಾ ಪ್ರೌಢ ಶಾಲೆಯ ಆವರಣದ ಬಳಿ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಕೋಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ ಈ ಕೆಳಕಂಡ 03 ಜನ ಆರೋಪಿತರನ್ನು ದಸ್ತಗಿರಿ ಮಾಡಿದೆ.
ಜಬಿ ವುಲ್ಲಾ 20 ವರ್ಷ ವಾಸ ಶರಾವತಿ ನಗರ ಶಿವಮೊಗ್ಗ, ಜೈದಾನ್ 21 ವರ್ಷ ವಾಸ ಬಾಪೂಜಿ ನಗರ ಶಿವಮೊಗ್ಗ, ಮೊಹಮದ್ ಗೌಸ್ 19 ವರ್ಷ ವಾಸ ಹೊಸೂರು ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿದ್ದು,
ಆರೋಪಿತರಿಂದ ರೂ 2,800/- ಮೌಲ್ಯದ 105 ಗ್ರಾಂ ತೂಕದ ಮಾದಕ ದ್ರವ್ಯ ಗಾಂಜಾ ಹಾಗೂ
ರೂ 470/- ನಗದನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳ ವಿರುದ್ಧ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಪೊಲೀಸ್ ಅಧೀಕ್ಷಕರು ಅಭಿನಂಧಿಸಿದ್ದಾರೆ.