Site icon TUNGATARANGA

ಬಿಜೆಪಿ ಸರ್ಕಾರದಲ್ಲಿ ಬೀದಿಗೆ ಬಿದ್ದ ಗ್ರಾ.ಪಂ.ಸದಸ್ಯರು!, ಪರಿಷತ್ ಚುನಾವಣೆಯಲ್ಲಿ ಪ್ರಸನ್ನಕುಮಾರ್ ಗೆಲುವು ಖಚಿತ: ಮಧುಬಂಗಾರಪ್ಪ


ಶಿವಮೊಗ್ಗ: ಅಧಿಕಾರವನ್ನು ಮೊಟಕುಗೊಳಿಸುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರನ್ನು ಈ ಸರ್ಕಾರ ಬೀದಿಗೆ ತಂದು ನಿಲ್ಲಿಸಿದೆ. ಗ್ರಾ.ಪಂಗಳಿಗೆ ಹೆಚ್ಚಿನ ಅಧಿಕಾರ ದೊರೆಯ ಬೇಕು. ಗ್ರಾ.ಪಂ ಸದಸ್ಯರಿಗೆ ಹೆಚ್ಚಿನ ಅನು ದಾನ ಹಾಗೂ ಗೌರವ ದೊರೆಯಬೇಕು ಎಂದರೆ ಈ ಭಾರಿ ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿ ಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಗ್ರಾಮಪಂಚಾಯಿತಿಗಳ ಅಧಿಕಾರವನ್ನೇ ಮೊಟಕುಗೊಳಿಸಲಾಗಿದೆ. ಯಾವುದೇ ಸ್ವನಿರ್ಧಾರದ ಯೋಜನೆಗಳನ್ನು ಅವರು ಮಾಡುವಂತಿಲ್ಲ. ಅನುದಾನವನ್ನು ಕೂಡ ಹೆಚ್ಚು ಮಾಡಿಲ್ಲ. ಗ್ರಾಮಪಂಚಾಯಿತಿ ಸದಸ್ಯರ ವೇತನ ಕೂಡ ಹೆಚ್ಚು ಮಾಡಿಲ್ಲ. ಮೂಲ ಭೂತ ಸೌಕರ್ಯಗಳಿಗೆ ಒತ್ತು ಕೊಡುತ್ತಿಲ್ಲ. ಬಿಜೆಪಿ ಆಡಳಿತದಲ್ಲಿ ಗ್ರಾಮೀಣಾಭಿ ವೃದ್ಧಿಯೇ ಮರಿಚಿಕೆಯಾಗಿದೆ. ಸರ್ಕಾರದ ಯೋಜನೆಗಳು ಕೂಡ ತಲುಪದೆ ಹೋಗಿದೆ ಎಂದು ಆರೋಪಿಸಿದರು.
ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಸರಳ ಸಜ್ಜನರಾಗಿ ದ್ದಾರೆ. ತಮ್ಮ ಕಳೆದ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ಅವರು ಗೆಲ್ಲುವುದು ಖಚಿತ, ಅವರನ್ನು ಅತ್ಯಂತ ಹೆಚ್ಚು ಅಂತರದಲ್ಲಿ ಗೆಲ್ಲಿಸಬೇ ಕಾಗಿದೆ. ಈಗಾಗಲೇ ಅವರ ಪರ ದಾವಣU ರೆಯ ಮೂರು ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಪ್ರಚಾರ ಕಾರ್ಯ ಆರಂಭವಾಗಿದೆ. ಬಹುತೇಕ ಎಲ್ಲರು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.


ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ. ಕಾಂಗ್ರೆಸ್‌ನ ಸಾಧನೆಗಳನ್ನು ಜನರಿಗೆ ತಲುಪಿಸುತ್ತೇವೆ. ಆ ಮೂಲಕವೇ ಮತ ಕೇಳುತ್ತೇವೆ. ಈ ಬಾರಿ ಆರ್.ಪ್ರಸನ್ನ ಕುಮಾರ್ ಅವರ ಗೆಲುವು ಖಚಿತ. ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ್, ವಿಜಯಕುಮಾರ್(ದನಿ) ಎಸ್.ಪಿ.ದಿನೇಶ್, ಜಿ.ಡಿ.ಮಂಜುನಾಥ್, ಬಿ,ಆರ್‌ನಾಗರಾಜ್, ಶಿವಾನಂದ್, ದೇವಿಕುಮಾರ್, ರಾಜ್ ಸೇರಿದಂತೆ ಹಲವರಿದ್ದರು.

ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಹದಗೆಟ್ಟಿದೆ. ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯರು ಕೂಡ ಇದರಿಂದ ಬೇಸರಗೊಂಡಿದ್ದಾರೆ. ಒಟ್ಟಾರೆ ಜನರ ಭಾವನೆಗಳಿಗೆ ಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಗ್ರಾ.ಪಂ.ಸದಸ್ಯರಿಗೆ ಸಹಜವಾದ ಸಿಟ್ಟಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿಯ ಅಭ್ಯರ್ಥಿಗಳು ಈ ಭಾರಿ ಪರಿಷತ್ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಸೋಲು ಕಾಣಲಿದ್ದಾರೆ.
-ಮಧು ಬಂಗಾರಪ್ಪ, ಮಾಜಿ ಶಾಸಕ

ಮುಖ್ಯವಾಗಿ ಜೆಡಿಎಸ್ ಬೆಂಬಲಿತ ಗ್ರಾ.ಪಂ.ಸದಸ್ಯರು ಕೂಡ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ. ರಾಜ್ಯಮಟ್ಟದಲ್ಲಿ ಪಕ್ಷದ ಮುಖಂಡರುಗಳ ತೀರ್ಮಾನಗಳು ಏನೇ ಇದ್ದರೂ ಅದು ಸ್ಥಳೀಯವಾಗಿ ನಡೆಯುವುದಿಲ್ಲ. ಇಲ್ಲಿ ಸ್ಥಳೀಯ ಮತದಾರರದ್ದೇ ಅಂತಿಮ ನಿರ್ಧಾರವಾಗುತ್ತದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಗ್ರಾ.ಪಂ.ಮಟ್ಟದಲ್ಲಿ ಒಂದು ರೀತಿಯ ಮಾನಸಿಕ ಹೊಂದಾಣಿಕೆ ಇದೆ. ಜೆಡಿಎಸ್ ಬೆಂಬಲಿತ ಸದಸ್ಯರು ಬಿಜೆಪಿಯನ್ನು ಬೆಂಬಲಿಸುವುದು ಕಷ್ಟ ಸಾಧ್ಯ. ತಾವು ಸಹ ಈಗಾಗಲೇ ಜೆಡಿಎಸ್ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಬಳಿಗಾರ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್‌ಗೆ ಅವರಿಂದ ಬೆಂಬಲ ನಿರೀಕ್ಷೆ ಮಾಡಿದ್ದೇನೆ.

Exit mobile version