Site icon TUNGATARANGA

ಸಿಮ್ಸ್ ನ ಅಧೀಕ್ಷಕರಾಗಿ ಡಾ. ಎಸ್. ಶ್ರೀಧರ್

ಶಿವಮೊಗ್ಗ, ಜು.21: ಸಿಮ್ಸ್ ನ ವೈಧ್ಯಕೀಯ ಅಧೀಕ್ಷರಾಗಿ ಮೆಗ್ಗಾನ್ ನ ಇ ಅಂಡ್ ಟಿ ವೈದ್ಯರು ಹಾಗೂ ಅನುಭವಿ ವೈದ್ಯರೂ ಆದ ಡಾ.ಶ್ರೀಧರ್ ರನ್ನ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹುದ್ದೆಯಲ್ಲಿ ಪ್ರಭಾರರಾಗಿ ಇದ್ದ ಡಾ. ವಿರೂಪಾಕ್ಷಪ್ಪನವರನ್ನ ರಿಲೀವ್ ಮಾಡಿರುವ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಡಾ.ಶ್ರೀಧರ್ ರವನ್ನು ನೇಮಿಸಿ ಆದೇಶಿಸಿದೆ. ಹಾಗೂ ವಿರೂಪಾಕ್ಷಪ್ಪನವರನ್ನ ಜನರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರನ್ನಾಗಿ ಮುಂದುವರೆಯುವಂತೆ ಸೂಚಿಸಿದೆ.
ಆಡಳಿತಾತ್ಮಕ ಹಿತಾದೃಷ್ಠಿಯಿಂದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಡಾ.ಶ್ರೀಧರ್ ರವರನ್ನ ವೈದ್ಯಕೀಯ ಅಧೀಕ್ಷಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

Exit mobile version