ಬೆಂಗಳೂರು : ಬೆಂಗಳೂರು ನಗರಲ್ಲಿ ಆರ್ಥಿಕ ಚೇತರಿಕೆಯಂತ ಕಾರ್ಯಗಳು ನಡೆಯಬೇಕಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ. ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್ ಡೌನ್ ತೆರವಾಗಲಿದೆ. ಎಂದಿನಂತೆ ಚಟುವಟಿಕೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟ ಪಡಿಸಿದರು.
ನಾನು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ. ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ. ಸಾಮಾಜಿಕ ಅಂತರ, ಮಾಸ್ಕ್ ಧರಿಸೋದನ್ನು ಮರೆಯಬೇಡಿ. ಈ ಮೂಲಕ ಕೊರೋನಾ ನಿಯಂತ್ರಣಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದರು.
ರಾಜ್ಯದ ಜನರನ್ನು ಉದ್ದೇಶಿಸಿ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಿದರು.
ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣ ಮಾಡುತ್ತಿರುವಲ್ಲಿ ಪ್ರಾರಂಭದಲ್ಲಿ ಯಶಸ್ವಿಯಾಗಿದ್ದು, ಆದರೆ ಇತ್ತೀಚೆಗೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದರು.
ರಾಜ್ಯದ ಜನತೆಗೆ ಹೇಳುವುದಿಷ್ಟೇ ಲಾಕ್ ಡೌನ್ ಒಂದೇ ಪರಿಹಾರವಲ್ಲ. ಇದರ ಬದಲಾಗಿ ಸಾಮಾಜಿ ಅಂತರ, ಮಾಸ್ಕ್ ಧರಿಸೋದ್ರಿಂದ ಕೊರೋನಾ ತಡೋಗಟ್ಟಬಹುದು. ಈಗಾಗಲೇ ನಾನು ಎಲ್ಲಾ ಶಾಸಕರು, ಸಚಿವರು, ನರ್ಸ್ ಗಳು, ಡಾಕ್ಟರ್, ಆಶಾ ಕಾರ್ಯಕರ್ತೆಯರು ಪ್ರಾಣದ ಹಂಗು ತೊರೆದು ತಮ್ಮ ಪ್ರಾಣನ್ನೇ ಮುಡುಪಾಗಿಟ್ಟು ಕೊರೋನಾ ತಡೆಯಲು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಉಳಿದು ಬದುಕಬೇಕು ಅಂದ್ರೆ.. ಕೋವಿಡ್ ನಿಂದ ದೂರ ಇರಬೇಕಾದ್ರೇ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಕೋವಿಡ್ ನಿಯಂತ್ರಣಕ್ಕೆ ತಜ್ಞರು ಕೊಟ್ಟಿರುವಂತ ಸಲಹೆ 5ಟಿ ಸಲಹೆ ಟ್ರೇಸ್, ಟ್ರಾಕ್, ಟೆಸ್, ಟ್ರೀಟ್ ಅಂಡ್ ಟೆಕ್ನಾಲಟಿಯನ್ನು ಬಳಸಿಕೊಂಡರೇ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಕೂಡ ನನ್ನ ನಂಬಿಕೆ. ಪ್ರತಿ ಕೋವಿಡ್ ಸೋಂಕಿತರಿಗೆ 45 ಜನ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್ ಮತ್ತು ಕೋವಿಡ್ ಅಲ್ಲದ ರೋಗಿಗಳನ್ನು ಖಾಸಗೀ ಆಸ್ಪತ್ರೆಯಲ್ಲಿ ದಾಖಲಿಸುವಂತ ಸಮಸ್ಯೆಯಲ್ಲಿ ಉಂಟಾಗುತ್ತಿದ್ದಂತ ಸಮಸ್ಯೆ ಸರಿ ಪಡಿಸಲಾಗಿದೆ ಎಂದರು.