Site icon TUNGATARANGA

ತರಂಗ ಶಾಲೆ ಮಕ್ಕಳಿಗೆ ಲೇಖನ ಸಾಮಾಗ್ರಿ ಹಾಗೂ ಅಗತ್ಯ ವಸ್ತುಗಳ ವಿತರಣೆ

ಶಿವಮೊಗ್ಗ: ಸಮಾಜದ ಪ್ರತಿಯೊಬ್ಬರಲ್ಲಿಯೂ ಸೇವಾ ಮನೋಭಾವನೆ ಅತ್ಯಂತ ಮುಖ್ಯ. ನಿಜವಾಗಿಯು ಕಷ್ಟದಲ್ಲಿರುವವರನ್ನು ಗುರುತಿಸಿ ಸಕಾಲದಲ್ಲಿ ಸೇವೆ ಒದಗಿಸಿ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಹಕಾರ ನೀಡಬೇಕು ಎಂದು ಉದ್ಯಮಿ, ತರಂಗ ಸಂಸ್ಥೆ ಟ್ರಸ್ಟಿ ಭಾಸ್ಕರ್ ಕಾಮತ್ ಹೇಳಿದರು.
ಶಿವಮೊಗ್ಗ ನಗರದ ತರಂಗ ಶಾಲೆ ಆವರಣದಲ್ಲಿ ಶಾಶ್ವತಿ ಪ್ರತಿಷ್ಠಾನ, ರೋಟರಿ ಉತ್ತರ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಉತ್ತರ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಅಗತ್ಯವಿರುವ ವಸ್ತುಗಳು, ಬಟ್ಟೆ, ಸ್ಯಾನಿಟೈಸರ್, ಮಾಸ್ಕ್ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ಸೇವೆ ಸದಾ ನಮ್ಮನ್ನು ಕಾಪಾಡುತ್ತದೆ. ಸೇವೆ ಸಾರ್ಥಕ ಆಗಬೇಕಾದರೆ ಅಗತ್ಯವಿರುವವರನ್ನು ಗುರುತಿಸಿ ಸೇವೆ ಮಾಡಬೇಕು ಎಂದು ತಿಳಿಸಿದರು.


ಶಾಶ್ವತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಎ.ಎಸ್.ಚಂದ್ರಶೇಖರ್ ಮಾತನಾಡಿ, ಸರ್ಕಾರದ ಯಾವುದೇ ಸಹಕಾರ ಇಲ್ಲದೇ ನಡೆಸುತ್ತಿರುವ ತರಂಗ ಸಂಸ್ಥೆಗೆ ದಾನಿಗಳು ಕೈಜೋಡಿಸಿ ಸಹಕರಿಸಬೇಕು. ಉಚಿತವಾಗಿ ನಡೆಸುತ್ತಿರುವ ಸಂಸ್ಥೆ ರಾಜ್ಯದಲ್ಲಿಯೇ ಮಾದರಿಯಾಗಿದೆ. ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೀತು ಅನಿಲ್‌ಶೇಖರ್ ಅವರು 60 ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ವಿತರಿಸಿದರು. ಇನ್ನರ್‌ವ್ಹೀಲ್ ಅಧ್ಯಕ್ಷೆ ಸುಧಾ ಪಾಂಡು ಅವರು ಸ್ಯಾನಿಟೈಸರ್ ಮಾಸ್ಕ್ಅನ್ನು ವಿತರಿಸಿದರು. ನಂತರ ಎಲ್ಲ ಮಕ್ಕಳಿಗೂ ಸಿಹಿ ಹಂಚಲಾಯಿತು.
ಮಕ್ಕಳಿAದ ಆಕರ್ಷಕ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇನ್ನರ್‌ವ್ಹೀಲ್ ಮಾಜಿ ಜಿಲ್ಲಾ ಚರ‍್ಮನ್ ಭಾರತಿ ಚಂದ್ರಶೇಖರ್, ನಿವೃತ್ತ ಬಿಇಒ ಚಂದ್ರಮ್ಮ, ವಲಯ11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ರವೀಂದ್ರನಾಥ್ ಐತಾಳ್, ಉಮೇಶ್, ನಳಿನಾ, ಕೃಷ್ಣ, ಶಾಲಿನಿ ಕಾಮತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version