Site icon TUNGATARANGA

ಶಿವಮೊಗ್ಗ: ಇಂದು ಸಂಜೆ ನಡೆಯುವ ಆಸ್ತಿ ತೆರಿಗೆದಾರರ ಸಭೆಗೆ ಬನ್ನಿ

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಂಟಿ ಆಶ್ರಯದಲ್ಲಿ ದಿನಾಂಕ:26-10-21ರ ಮಂಗಳವಾರ ಸಂಜೆ 6:00 ಗಂಟೆಗೆ ಶಿವಮೊಗ್ಗದ ಸಮಸ್ತ ಆಸ್ತಿ ತೆರಿಗೆದಾರರ ಸಭೆಯನ್ನು ಸಿಟಿ ಕ್ಲಬ್ ಹಿಂಭಾಗದಲ್ಲಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಚೇರಿಯಲ್ಲಿ ಕರೆಯಲಾಗಿದೆ.

ಅವೈಜ್ಞಾನಿಕ ಮತ್ತು ತೀವ್ರ ಹೆಚ್ಚಳವಾಗಿರುವ ಆಸ್ತಿ ತೆರಿಗೆಯನ್ನು ವಿರೋಧಿಸಿ ಈಗಾಗಲೇ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಹೋರಾಟದ ಮುಂದಿನ ಮಾರ್ಗಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಈ ಸಭೆಯನ್ನು ಆಯೋಜಿಸಲಾಗಿದೆ.
ಈ ಸಭೆಗೆ ಈಗಾಗಲೇ ಆಸ್ತಿತೆರಿಗೆ ಪಾವತಿಸಿರುವ ಮತ್ತು ಪಾವತಿಸದೇ ಇರುವ ಎಲ್ಲಾ ತೆರಿಗೆದಾರರು ತಪ್ಪದೇ ಭಾಗವಹಿಸಬೇಕಾಗಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪರವಾಗಿ ಕೆವಿ ವಸಂತಕುಮಾರ್ ಮತ್ತು ಡಾ. ಸತೀಶ್ ಕುಮಾರ್ ಶೆಟ್ಟಿ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪರವಾಗಿ ಜೆಆರ್ ವಾಸುದೇವ್ ಮತ್ತು ಬಿ ಗೋಪಿನಾಥ್ ಅವರು ತಿಳಿಸಿರುತ್ತಾರೆ.

Exit mobile version