ಶಿವಮೊಗ್ಗ, ಅ.21:
ಇಂದು ರಾತ್ರಿ ಎಂಟುಮೂವತ್ತರಿಂದ ಸುರಿಯುತ್ತಿರುವ ಬಾರೀ ಮಳೆಗೆ ನಗರದ ಜನ ತತ್ತರಿಸಿದ್ದಾರೆ.
ನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದವರ ಪಾಡು ಭಗವಂತನಿಗೇ ಪ್ರೀತಿ ಎಂಬಂತಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಈ ಮಳೆಯ ರಬಸ ನಗರದ ಬಹುತೇಕ ಕಡೆಗಿನ ಸ್ಮಾರ್ಟ್ ಸಿಟಿ ಕಾಮಗಾರಿಯ ಕಳಪೆತನವನ್ನು ಬಯಲಿಗೆಳೆದಿದೆ.
ಈಗಷ್ಟೆ ಶಿವಮೊಗ್ಗ ಬಾಲರಾಜ್ ಅರಸ್ ರಸ್ತೆಯ ಡಿಸಿಸಿ ಬ್ಯಾಂಕ್ ಪಕ್ಕದ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿರುವುದನ್ನೂ ಗಮನಿಸಿದರೆ, ಶಿವಮೊಗ್ಗ ನಗರದಾದ್ಯಂತ ನಡೆದಿರುವ ಕಳಪೆತನವನ್ನು ಬಯಲಿಗೆಳೆಯುತ್ತಿದೆ ಎನ್ನಲಾಗಿದೆ.
ಕೆಲ ಚಿತ್ರಣಗಳೊಂದಿಗೆ ಮಾಹಿತಿ.